ಶುಕ್ರವಾರ, ಜೂನ್ 25, 2021
21 °C

ಲಸಿಕೆ ಹಾಕಿಸಿಕೊಂಡರೆ ಕೋವಿಡ್ ಹರಡುವಿಕೆ ಸಾಧ್ಯತೆ ಕಮ್ಮಿ: ಬ್ರಿಟನ್ ಆರೋಗ್ಯ ಇಲಾಖೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಆಸ್ಟ್ರಾಜೆನೆಕಾ ಕಂಪನಿಯ ಕೋವಿಶೀಲ್ಡ್‌ ಲಸಿಕೆ ಮತ್ತು ಫೈಝರ್‌ ಕಂಪನಿಯ ಕೋವಿಡ್‌ ಲಸಿಕೆಯ ಮೊದಲ ಡೋಸ್ ಹಾಕಿಸಿ ಕೊಂಡರೆ, ಕೊರೊನಾ ವೈರಾಣು ಹರಡುವ ಸಾಧ್ಯತೆ ಶೇ 50ರಷ್ಟು ಕಡಿಮೆಯಾಗುತ್ತದೆ ಎಂದು ಬ್ರಿಟನ್‌ನ ಸಾರ್ವಜನಿಕ ಆರೋಗ್ಯ ಇಲಾಖೆ ಹೇಳಿದೆ.

ಲಸಿಕೆಯ ಪರಿಣಾಮಗಳ ಬಗ್ಗೆ ನಡೆ ಸಿದ ಅಧ್ಯಯನ ವರದಿಯನ್ನು ಆಧರಿಸಿ ಇಲಾಖೆ ಹೀಗೆ ಹೇಳಿದೆ. ಅಧ್ಯಯನ ವರದಿಯು ಲ್ಯಾನ್ಸೆಟ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. 24,000 ಕುಟುಂಬಗಳ 57,000 ಜನರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.

‘ಈ ಎರಡರಲ್ಲಿ ಒಂದು ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದ ವರಿಗೆ ಕೋವಿಡ್‌ ತಗುಲಿದ್ದರೂ, ಅವ ರಿಂದ ಕೋವಿಡ್ ಬೇರೆಯವರಿಗೆ ತಗ ಲುವ ಸಾಧ್ಯತೆಯಲ್ಲಿ ಶೇ 50ರಷ್ಟು ಇಳಿಕೆಯಾಗುತ್ತದೆ. ಲಸಿಕೆ ಹಾಕಿಸಿಕೊಂಡ ಮೂರು ವಾರದ ನಂತರ, ಕೋವಿಡ್‌ ಹರಡುವ ಸಾಧ್ಯತೆಯಲ್ಲಿ ಶೇ 38ರಿಂದ ಶೇ 49ರಷ್ಟು ಕಡಿಮೆಯಾಗುತ್ತದೆ' ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ಲಸಿಕೆಯ ಒಂದು ಡೋಸ್‌ ಪಡೆದುಕೊಂಡರೆ, ಕೋವಿಡ್‌ ರೋಗಿ ಯಿಂದ ಅವರ ಮನೆಯವರಿಗೆ ಸೋಂಕು ಹರಡುವ ಸಾಧ್ಯತೆ ಶೇ 50ರಷ್ಟು ಕಡಿಮೆಯಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಹಾಕಿಸಿಕೊಂಡ ವ್ಯಕ್ತಿ ಮಾತ್ರವಲ್ಲದೆ, ಅವರ ಕುಟುಂಬದವರಿಗೂ ಸ್ವಲ್ಪ ರಕ್ಷಣೆ ದೊರೆಯುತ್ತದೆ. ಹೀಗಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ. ಲಸಿಕೆ ಹಾಕಿಸಿಕೊಂಡವರಲ್ಲಿ ಕೋವಿಡ್‌ ದೃಢ ಪಟ್ಟರೂ, ಕೋವಿಡ್‌ನ ಲಕ್ಷಣಗಳು ಕಾಣಿಸಿ ಕೊಳ್ಳುವ ಪ್ರಮಾಣ ಅತ್ಯಂತ ಕಡಿಮೆ’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ನಾವು ಸಾಮಾನ್ಯ ಬದುಕಿಗೆ ಮರಳಲು ಲಸಿಕೆ ನೆರವು ನೀಡುತ್ತದೆ. ಆದರೆ, ಲಸಿಕೆ ಪಡೆದುಕೊಂಡಿದ್ದರೂ ಕೋವಿಡ್‌ ಹರಡುವ ಸಾಧ್ಯತೆ ಇದೆ. ಹೀಗಾಗಿ ಮಾಸ್ಕ್ ಧರಿಸುವುದು, ಕೈತೊಳೆಯುವುದು ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸಲೇಬೇಕು’ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ನಾಲ್ವರಲ್ಲಿ ಒಬ್ಬರಿಗೆ ಅಡ್ಡಪರಿಣಾಮ
‘ಈ ಎರಡೂ ಲಸಿಕೆ ಹಾಕಿಸಿಕೊಂಡ ಪ್ರತಿ ನಾಲ್ವರಲ್ಲಿ ಒಬ್ಬರಿಗೆ ಸೌಮ್ಯ ಸ್ವಭಾವದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುತ್ತವೆ’ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

‘ಲಸಿಕೆ ಹಾಕಿಸಿಕೊಂಡ 24 ಗಂಟೆಗಳ ಒಳಗೆ ತಲೆನೋವು, ದಣಿವು ಮತ್ತು ಸಣ್ಣ ಜ್ವರ ಕಾಣಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ. ಒಂದು ಅಥವಾ ಎರಡು ದಿನದಲ್ಲಿ ಈ ಅಡ್ಡ ಪರಿಣಾಮಗಳು ನಿವಾರಣೆಯಾಗುತ್ತವೆ. 50 ವರ್ಷ ಮೇಲ್ಪಟ್ಟವರಲ್ಲಿ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು’ ಎಂದು ಅಧ್ಯಯನ ವರದಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು