ಪೆರು: 250 ಮೀಟರ್ ಕಂದಕಕ್ಕೆ ಉರುಳಿದ ಬಸ್, 27 ಪ್ರಯಾಣಿಕರ ಸಾವು

ಲಿಮಾ(ಪೆರು): ಚಾಲಕ ನಿದ್ರೆಗೆ ಜಾರಿದ ಪರಿಣಾಮ ಪರ್ವತ ಪ್ರದೇಶದಿಂದ ಬಸ್ 250 ಮೀಟರ್ ಆಳದ ಕಂದಕಕ್ಕೆ ಉರುಳಿದ ಘಟನೆ ದಕ್ಷಿಣ ಪೆರು ಪ್ರದೇಶದಲ್ಲಿ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ 27 ಮಂದಿ ಪ್ರಯಾಣಿಕರು ಚಿರನಿದ್ರೆಗೆ ಜಾರಿದ್ದಾರೆ.
ಶನಿವಾರ ಬೆಳಗ್ಗೆ ಸಂಭವಿಸಿದ ದುರಂತದಲ್ಲಿ 16 ಮಕ್ಕಳು ಗಾಯಗೊಂಡಿರುವುದಾಗಿ ಸುದ್ದಿ ಏಜೆನ್ಸಿ ಎಎನ್ಐ ವರದಿ ಮಾಡಿದೆ.
ಪ್ರಪಾತದ ಬಳಿಯೇ ಹಾದು ಹೋದ ರಸ್ತೆಯು ಅತ್ಯಂತ ಕಡಿದಾಗಿದ್ದು, ವಾಹನ ಸಂಚಾರ ದುರ್ಗಮವಾಗಿದೆ. ವಾಹನ ಚಲಾಯಿಸಲು ಅಪಾಯಕಾರಿಯಾಗಿರುವ ರಸ್ತೆಯಲ್ಲಿ ನಸುಕಿನ ಜಾವದಲ್ಲಿ ಬಸ್ ಸಂಚರಿಸುತ್ತಿತ್ತು. ಹಿಂದಿನ ದಿನದ ಕೆಲಸದ ಒತ್ತಡದಲ್ಲಿ ನಿದ್ರೆಗೆಟ್ಟಿದ್ದ ಚಾಲಕ ದಾರಿ ಮಧ್ಯೆ ತೂಕಡಿಸಿದ್ದರಿಂದ ಬಸ್ ನಿಯಂತ್ರಣ ತಪ್ಪಿ ಕಂದಕಕ್ಕೆ ಜಾರಿದೆ ಎನ್ನಲಾಗಿದೆ.
ಕೇವಲ 10 ದಿನಗಳಲ್ಲಿ ಪೆರುವಿನಲ್ಲಿ ಸಂಭವಿಸಿದ ಎರಡನೇ ದುರ್ಘಟನೆ ಇದಾಗಿದೆ. ತಿರುವು ಮುರುವಿನ ರಸ್ತೆಯಲ್ಲಿ ಬೈಕ್ ಸವಾರರು ಅತ್ಯಂತ ವೇಗವಾಗಿ ಓಡಿಸುವುದು, ಕಳಪೆ ಗುಣಮಟ್ಟದ ಹೆದ್ದಾರಿ ನಿರ್ವಹಣೆ, ಅಪಾಯದ ಮುನ್ಸೂಚನೆ ನೀಡುವ ಎಚ್ಚರಿಕೆ ಬೋರ್ಡ್ ಗಳ ಕೊರತೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯವೇ ಇಂತಹ ದುರಂತಗಳಿಗೆ ಕಾರಣ ಎನ್ನಲಾಗಿದೆ.
ಕೇಂದ್ರ ಸಂಪುಟ ಪುನಾರಚನೆ: ನೂತನ ಮಂತ್ರಿಗಳಾಗಿ ಮೋದಿ ಟೀಂ ಸೇರುವವರಾರು?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.