ಕೇಪ್ ಕ್ಯಾನವೆರೆಲ್ (ಅಮೆರಿಕ) (ಎಪಿ): ಐದು ತಿಂಗಳ ಅಧ್ಯಯನದ ನಂತರ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳು ಶನಿವಾರ ತಡರಾತ್ರಿ ಭೂಮಿಗೆ ಹಿಂದಿರುಗಿದರು.
ಫ್ಲೋರಿಡಾ ಕರಾವಳಿ ಸಮೀಪದ ಗಲ್ಫ್ ಆಫ್ ಮೆಕ್ಸಿಕೊದಲ್ಲಿ ಸ್ಪೇಸ್‌ಎಕ್ಸ್ ಕ್ಯಾಪ್ಸೂಲ್ ಬಂದಿಳಿಯಿತು. ಅಮೆರಿಕದ ನಾಸಾದ ಗಗನಯಾತ್ರಿ ನಿಕೋಲೆ ಮನ್ ನೇತೃತ್ವದ ಗಗನಯಾತ್ರಿಗಳು ಶನಿವಾರ ಬೆಳಿಗ್ಗೆ ಬಾಹ್ಯಾಕಾಶ ಕೇಂದ್ರದಿಂದ ಹೊರಟು 19 ತಾಸುಗಳ ಒಳಗಾಗಿ ಭೂಮಿಗೆ ಬಂದಿಳಿದಿದ್ದಾರೆ.
ಅಮೆರಿಕ– ರಷ್ಯಾ– ಜಪಾನ್‌ನ ನಾಲ್ವರು ಗಗನಯಾತ್ರಿಗಳು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.