ಶನಿವಾರ, ಏಪ್ರಿಲ್ 1, 2023
23 °C

ಕೇವಲ ನಾಲ್ಕು ಗಂಟೆ ಅಂತರದಲ್ಲಿ ಎರಡು ರಾಕೆಟ್‌ ಉಡಾಯಿಸಿದ ಸ್ಪೇಸ್‌ಎಕ್ಸ್‌

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ವಿಶ್ವದ ಸಿರಿವಂತ ಉದ್ಯಮಿ, ಇಲೋನ್ ಮಸ್ಕ್ ಅವರ ಬಾಹ್ಯಾಕಾಶ ಸಂಸ್ಥೆ ‘ಸ್ಪೇಸ್‌ಎಕ್ಸ್’ ಶುಕ್ರವಾರ ಕೇವಲ ನಾಲ್ಕು ಗಂಟೆಗಳ ಅಂತರದಲ್ಲಿ ಎರಡು ರಾಕೆಟ್‌ಗಳನ್ನು ಯಶಸ್ವಿಯಾಗಿ ಉಡಾಯಿಸಿದೆ.

52 ಸ್ಟಾರ್‌ಲಿಂಕ್ ಇಂಟರ್ನೆಟ್ ಉಪಗ್ರಹಗಳ ಗುಚ್ಚವುಳ್ಳ ರಾಕೆಟ್‌ ಅನ್ನು ಶನಿವಾರ ಮಧ್ಯಾಹ್ನ 3.26ಕ್ಕೆ ಕ್ಯಾಲಿಫೋರ್ನಿಯಾದ ವಾಂಡೆನ್‌ಬರ್ಗ್ ಸ್ಪೇಸ್ ಫೋರ್ಸ್ ಉಡಾವಣಾ ಕೇಂದ್ರದಿಂದ ಕಕ್ಷೆಗೆ ಹಾರಿಸಲಾಗಿತ್ತು. ನಂತರ, ಸಂಜೆ 7.38ಕ್ಕೆ ಎಸ್‌ಇಎಸ್‌-18 ಮತ್ತು ಎಸ್‌ಇಎಸ್‌-19 ಎಂಬ ದೂರಸಂಪರ್ಕ ಉಪಗ್ರಹಗಳನ್ನು ಹೊತ್ತ ‘ಫಾಲ್ಕನ್ 9’ ಅನ್ನು ಫ್ಲೋರಿಡಾದ ಕೇಪ್ ಕ್ಯಾನವೆರಲ್ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆ ಮಾಡಲಾಯಿತು.

‘ಇಂದು 4 ಗಂಟೆಗಳ ಅಂತರದಲ್ಲಿ ಎರಡು ‘ಫಾಲ್ಕನ್ 9’ ರಾಕೆಟ್‌ಗಳನ್ನು ಹಾರಿಸಲಾಗಿದೆ. ಇದಕ್ಕಾಗಿ ಸ್ಪೇಸ್‌ಎಕ್ಸ್ ತಂಡಕ್ಕೆ ಅಭಿನಂದನೆಗಳು. 2023ರಲ್ಲಿ ಇದು ನಮ್ಮ 18 ಮತ್ತು 19ನೇ ಕಾರ್ಯಾಚರಣೆಯಾಗಿದೆ’ ಎಂದು ಸಂಸ್ಥೆ ಅಧಿಕಾರಿಗಳು ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಎರಡೂ ಕಾರ್ಯಾಚರಣೆಗಳು ಯಶಸ್ವಿಯಾಗಿವೆ. ಸ್ಟಾರ್‌ಲಿಂಕ್ ಉಪಗ್ರಹಗಳನ್ನು ನಿಗದಿತ ಸಮಯಕ್ಕೆ ಕೆಳಭೂಸ್ಥಾಯಿ ಕಕ್ಷೆಗಳಿಗೆ ನಿಯೋಜಿಸಲಾಗಿದೆ. ಫಾಲ್ಕನ್ 9 ಕೂಡ ಎಸ್‌ಇಎಸ್‌-18 ಮತ್ತು ಎಸ್‌ಇಎಸ್‌-19 ಅನ್ನು ನಿಗದಿತ ಕಕ್ಷೆಗೆ ತಲುಪಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು