ಭಾನುವಾರ, ಸೆಪ್ಟೆಂಬರ್ 25, 2022
21 °C

ನಾಳೆಯಿಂದ ಚೀನಾದ ಗೂಢಚಾರಿಕೆ ನೌಕೆ ಲಂಕಾ ಪ್ರವೇಶಕ್ಕೆ ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಉಪಗ್ರಹಗಳು ಮತ್ತು ಖಂಡಾಂತರ ಕ್ಷಿಪಣಿಗಳನ್ನು ಪತ್ತೆಹಚ್ಚುವ ಚೀನಾದ ಗೂಢಚಾರಿಕೆಯ ಅತ್ಯಾಧುನಿಕ ನೌಕೆಗೆ ಶ್ರೀಲಂಕಾದ ಹಂಬಂಟೋಟದ ಬಂದರಿನಲ್ಲಿ ಮಂಗಳವಾರದಿಂದ ಲಂಗರು ಹಾಕಲು ಅನುಮತಿ ಸಿಕ್ಕಿರುವುದಾಗಿ ಚೀನಾ ಸೋಮವಾರ ಹೇಳಿದೆ.

ಭಾರತ ವ್ಯಕ್ತಪಡಿಸಿದ ಭದ್ರತಾ ಕಳವಳದಿಂದ ಆರಂಭದಲ್ಲಿ ಅನುಮತಿ ನಿರಾಕರಿಸಿದ್ದ ಶ್ರೀಲಂಕಾ, ಚೀನಾದ ಸಾಲದ ಬಲೆಯಲ್ಲಿ ಸಿಲುಕಿದ್ದು, ಈಗ ಮತ್ತೆ ಚೀನಿ ನೌಕೆಯ ಪ್ರವೇಶಕ್ಕೆ ಅನುಮತಿ ನೀಡಿದೆ. 

ನೌಕೆ ಪ್ರವೇಶ ಸಂಬಂಧ ಕೊಲಂಬೊ ಜೊತೆಗೆ ನಡೆದಿರುವ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸಲು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ ಬಿನ್ ನಿರಾಕರಿಸಿದ್ದಾರೆ.

ಹಂಬಂಟೋಟ ಬಂದರು ಅಭಿವೃದ್ಧಿಪಡಿಸಿ, ಆ ಸಾಲದ ತೀರುವಳಿಗಾಗಿ 99 ವರ್ಷಗಳವರೆಗೆ ಚೀನಾ ಈ ಬಂದರನ್ನು ಗುತ್ತಿಗೆ ಪಡೆದಿದೆ. ಬಂದರಿನಲ್ಲಿ ಲಂಗರು ಹಾಕಲಿರುವ ಗೂಢಚಾರಿ ನೌಕೆಯು ಉಪಗ್ರಹಗಳ ಕಾರ್ಯನಿರ್ವಹಣೆ ಮತ್ತು ಖಂಡಾಂತರ ಕ್ಷಿಪಣಿಗಳನ್ನು ಗುರುತಿಸುವ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. ಈ ನೌಕೆಯಲ್ಲಿ ಸುಮಾರು 2 ಸಾವಿರ ಮಂದಿ ನಾವಿಕರು ಇರಲಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು