ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ ಈಸ್ಟರ್‌ ಸಂಡೇ ದಾಳಿ: ಸುಪ್ರೀಂ ಆದೇಶಕ್ಕೆ ಸ್ವಾಗತ

Last Updated 13 ಜನವರಿ 2023, 15:35 IST
ಅಕ್ಷರ ಗಾತ್ರ

ಕೊಲಂಬೊ: 2019ರ ‘ಈಸ್ಟರ್‌ ಭಾನುವಾರ’ದಂದು ನಡೆದ ದಾಳಿಯ ಸಂತ್ರಸ್ತರಿಗೆ ಶ್ರೀಲಂಕಾ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು 100 ಮಿಲಿಯನ್‌ ರೂಪಾಯಿಯನ್ನು ಪರಿಹಾರವಾಗಿ ನೀಡಬೇಕು ಎಂದು ಇಲ್ಲಿನ ಸುಪ್ರೀಂಕೋರ್ಟ್‌ ತೀರ್ಪು ನೀಡಿರುವುದನ್ನು ಸ್ಥಳೀಯ ಕ್ಯಾಥೋಲಿಕ್‌ ಚರ್ಚ್‌ ಮುಖ್ಯಸ್ಥ ಕಾರ್ಡಿನಲ್‌ ಮಾಲ್ಕಮ್‌ ರಂಜಿತ್‌ ಸ್ವಾಗತಿಸಿದ್ದಾರೆ.

ದೇಶದ ಅತಿ ಕೆಟ್ಟ ಭಯೋತ್ಪಾದಕ ದಾಳಿಯನ್ನು ತಡೆಯುವಲ್ಲಿ ವಿಫಲರಾದ ಕಾರಣ ಸಿರಿಸೇನಾ ಮತ್ತು ಇತರ ನಾಲ್ವರು ಮಾಜಿ ಉನ್ನತ ಅಧಿಕಾರಿಗಳು ಸಂತ್ರಸ್ತರಿಗೆ ಒಟ್ಟು ₹310 ಮಿಲಿಯನ್‌ ಪರಿಹಾರ ನೀಡಬೇಕು ಎಂದು ಗುರುವಾರ ಕೋರ್ಟ್‌ ಆದೇಶಿಸಿತ್ತು.

2019 ಏಪ್ರಿಲ್‌ 21ರಂದು ಎನ್‌ಟಿಜೆ ಮತ್ತು ಐಎಸ್‌ ಉಗ್ರ ಸಂಘಟನೆಗೆ ಸೇರಿದ 9 ಮಂದಿ, ಕ್ಯಾಥೋಲಿಕ್‌ ಚರ್ಚ್‌ ಮತ್ತು ಐಷಾರಾಮಿ ಹೋಟೆಲ್‌ಗಳ ಮೇಲೆ ಆತ್ಮಾಹುತಿ ಬಾಂಬ್‌ ದಾಳಿ ನಡೆಸಿದ್ದರು. ಘಟನೆಯಲ್ಲಿ 11 ಮಂದಿ ಭಾರತೀಯರು ಸೇರಿ 270 ಮಂದಿ ಮೃತಪಟ್ಟಿದ್ದರು. 500 ಜನರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT