ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಕ್ಷ ರಾನಿಲ್‌ಗೆ ಬೆಂಬಲ ಸೂಚಿಸಿದ ತಮಿಳ್‌ ನ್ಯಾಷನಲ್‌ ಅಲಯನ್ಸ್‌

Last Updated 1 ಆಗಸ್ಟ್ 2022, 11:51 IST
ಅಕ್ಷರ ಗಾತ್ರ

ಕೊಲಂಬೊ: ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ ಅವರನ್ನು ಬೆಂಬಲಿಸುವುದಾಗಿ ಶ್ರೀಲಂಕಾದ ಮುಖ್ಯ ತಮಿಳು ಅಲ್ಪಸಂಖ್ಯಾತರ ಪಕ್ಷವಾದ ತಮಿಳ್‌ ನ್ಯಾಷನಲ್‌ ಅಲಯನ್ಸ್‌ (ಟಿಎನ್‌ಎ) ಸೋಮವಾರ ಘೋಷಿಸಿದೆ.

‘ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರತರಲು ಅಧ್ಯಕ್ಷ ರಾನಿಲ್‌ ಅವರು ಸರ್ವಪಕ್ಷ ಸರ್ಕಾರ ರಚಿಸಲು ಪ್ರಯತ್ನಿಸುತ್ತಿದ್ದಾರೆ. ಈ ಪ್ರಯತ್ನವು ಅತ್ಯುತ್ತಮವಾಗಿದ್ದು, ಇದಕ್ಕೆ ನಮ್ಮ ಬೆಂಬಲ ಇದೆ’ ಎಂದು ಪಕ್ಷದ ನಾಯಕ ಆರ್‌. ಸಂಪತ್ತನ್‌ ತಿಳಿಸಿದರು.

ಸರ್ವಪಕ್ಷ ಸರ್ಕಾರದಿಂದ ಮಾತ್ರವೇ ದೇಶದಲ್ಲಿರುವ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು ಪರಿಹರಿಸಲು ಸಾಧ್ಯವಾಗುತ್ತದೆ ಎಂದಿರುವ ಟಿಎನ್‌ಎ ಪಕ್ಷ ವಕ್ತಾರರೊಬ್ಬರು, ‘ಸಂಪುಟದಲ್ಲಿ ಪಕ್ಷದ ಸದಸ್ಯರ ಸ್ಥಾನಮಾನ ಏನಿರಬೇಕು ಎಂಬುದನ್ನು ಇನ್ನೂ ನಿರ್ಧರಿಸಲಾಗಿಲ್ಲ’ ಎಂದರು.

ಜುಲೈ 20ರಂದು ನಡೆದ ಅಧ್ಯಕ್ಷ ಚುನಾವಣೆ ವೇಳೆ, ಟಿಎನ್‌ಎ ಪಕ್ಷವು ರಾನಿಲ್‌ ವಿಕ್ರಮಸಿಂಘೆ ಅವರ ಪ್ರತಿಸ್ಪರ್ಧಿಯಾಗಿದ್ದ ದುಲ್ಲಾಸ್‌ ಅಲಹಪ್ಪೆರುಮಾ ಅವರ ಪರ ಮತ ಹಾಕಿತ್ತು. ಆದರೆ, ಪಕ್ಷದ ನಿಲುವಿಗೆ ವಿರುದ್ಧವಾಗಿ ಪಕ್ಷದ 20 ಸಂಸದರು ರಾನಿಲ್‌ ಅವರ ಪರ ಮತ ಚಲಾಯಿಸಿದ್ದರು.

ಸರ್ವಪಕ್ಷ ಸರ್ಕಾರ ರಚಿಸಲು ಸಹಕರಿಸಿ ಎಂದು ಸಂಸತ್‌ ಸದಸ್ಯರಿಗೆ ಅಧ್ಯಕ್ಷ ರಾನಿಲ್‌ ಅವರು ಕಳೆದ ವಾರ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಯಿಸಿದ ಶ್ರೀಲಂಕಾದ ಮುಖ್ಯ ವಿರೋಧ ಪಕ್ಷ ಸಮಾಗಿ ಜನ ಬಾಲವಿಗಯ (ಎಸ್‌ಜೆಬಿ), ‘ಪತ್ರವನ್ನು ಪಕ್ಷಗಳಿಗೆ ನೀಡಬೇಕು. ಸಂಸದರಿಗಲ್ಲ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT