ಶುಕ್ರವಾರ, ಮಾರ್ಚ್ 31, 2023
23 °C

ಕ್ಯಾಲಿಫೋರ್ನಿಯಾ: ಛತ್ರಪತಿ ಶಿವಾಜಿ ಪ್ರತಿಮೆ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನ್ಯೂಯಾರ್ಕ್‌ (ಪಿಟಿಐ): ಕ್ಯಾಲಿಫೋರ್ನಿಯಾದ ಸ್ಯಾನ್‌ಹೋಸೆ ನಗರದಲ್ಲಿರುವ ಗ್ವಾಡಾಲುಪೆ ರಿವರ್ ಉದ್ಯಾನವನದಲ್ಲಿದ್ದ ಛತ್ರಪತಿ ಶಿವಾಜಿ ಮಹಾರಾಜನ ಪ್ರತಿಮೆ ಕಾಣೆಯಾಗಿದೆ ಎಂದು ಸ್ಯಾನ್ ಹೋಸೆಯ ಪಾರ್ಕ್‌, ರಿಕ್ರಿಯೇಷನ್‌ ಆ್ಯಂಡ್ ನೈಬರ್‌ಹುಡ್‌ ಸರ್ವಿಸ್‌ನ  ಇಲಾಖೆ ಶುಕ್ರವಾರ ಟ್ವೀಟ್‌ ಮೂಲಕ ತಿಳಿಸಿದೆ.

ಭಾರತದ ಪುಣೆಯಿಂದ ಉಡುಗೊರೆಯಾಗಿ ಈ ಪ್ರತಿಮೆಯನ್ನು ನೀಡಲಾಗಿತ್ತು. ಪ್ರತಿಮೆ ಯಾವಾಗ ಕಳುವಾಗಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. 

‘ಮೂರ್ತಿ ಕಳುವಾಗಿರುವ ಬಗ್ಗೆ ನಮ್ಮ ಸಮುದಾಯದವರಿಗೆ ತಿಳಿಸಲು ನಾವು ವಿಷಾದಿಸುತ್ತೇವೆ.  ಮೂರ್ತಿಯನ್ನು ಆದಷ್ಟು ಬೇಗ ಹುಡುಕುವ ಕುರಿತು ಸಮುದಾಯದ ಮುಖಂಡರ ಜೊತೆ ನಾವು ಕೆಲಸ ಮಾಡುತ್ತಿದ್ದೇವೆ’ ಎಂದು ಇಲಾಖೆ ಟ್ವೀಟ್‌ ಮಾಡಿದೆ.

 ತನಿಖೆ ಆರಂಭಿಸಲಾಗಿದ್ದು, ಅಧಿಕಾರಿಗಳು ಸಾರ್ವಜನಿಕರ ಸಹಾಯ ಕೋರಿದ್ದಾರೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು