ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ್ದ ಹಡಗು ತೆರವು; ಸಂಚಾರ ಸರಾಗ

Last Updated 9 ಜನವರಿ 2023, 13:56 IST
ಅಕ್ಷರ ಗಾತ್ರ

ಇಸ್ಮೇಲಿಯಾ, ಈಜಿಪ್ಟ್‌: ಸುಯೆಜ್‌ ಕಾಲುವೆಯಲ್ಲಿ ಸಿಲುಕಿದ್ದ ಉಕ್ರೇನ್ ಸರಕು ಸಾಗಣೆ ಹಡಗನ್ನು ತೆರವುಗೊಳಿಸಿದ ನಂತರ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬಂದಿದ್ದು, ಎಂದಿನಂತೆ ಹಡಗುಗಳು ಸಂಚರಿಸುತ್ತಿವೆ ಎಂದು ಈಜಿಪ್ಟ್‌ನ ಸುಯೆಜ್ ಕಾಲುವೆ ಪ್ರಾಧಿಕಾರ ತಿಳಿಸಿದೆ.

‘ಟರ್ಕಿಯೆಯಿಂದ ಚೀನಾದತ್ತ ಸಾಗುತ್ತಿದ್ದ ಉಕ್ರೇನಿನ ಸರಕು ಸಾಗಣೆ ಹಡಗು ತಾಂತ್ರಿಕ ತೊಂದರೆಯ ಕಾರಣದಿಂದ ಕಾಲುವೆಯಲ್ಲಿ ಸಿಲುಕಿತ್ತು. ಇದರಿಂದ ಕೆಲ ಹೊತ್ತು ಸಂಚಾರದಟ್ಟಣೆ ಉಂಟಾಗಿತ್ತು. ಬಳಿಕ ಹಡಗಳನ್ನು ಟಗ್‌ಗಳ ಸಹಾಯದಿಂದ ಎಳೆದು ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು’ ಎಂದು ತಿಳಿಸಿದೆ.

2021ರಲ್ಲಿ ‘ಎವರ್ ಗಿವನ್’ ಹಡಗು ಕಾಲುವೆಯಲ್ಲಿ ಸಿಲುಕಿದ್ದರಿಂದ ಒಂದು ವಾರ ಹಡುಗುಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT