ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡ್ನಿಯಲ್ಲಿ ಸರ್ಫರ್‌ ಮೇಲೆ ಶಾರ್ಕ್‌ ದಾಳಿ: ತೀವ್ರವಾಗಿ ಗಾಯಗೊಂಡಿದ್ದ ಯುವಕ ಸಾವು

Last Updated 5 ಸೆಪ್ಟೆಂಬರ್ 2021, 9:10 IST
ಅಕ್ಷರ ಗಾತ್ರ

ಸಿಡ್ನಿ: ಪೂರ್ವ ಕರಾವಳಿಯಲ್ಲಿ ಶಾರ್ಕ್‌ ನಡೆಸಿದ ದಾಳಿಗೆ ಸರ್ಫರ್‌ವೊಬ್ಬರು ಭಾನುವಾರ ಸಾವಿಗೀಡಾಗಿದ್ದಾರೆ.

ನ್ಯೂ ಸೌಥ್‌ ವೇಲ್ಸ್‌ನ ಎಮೆರಾಲ್ಡ್‌ ಬೀಚ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಿಡ್ನಿಯಿಂದ ಇದು 530 ಕಿಲೋ ಮೀಟರ್‌ ದೂರದಲ್ಲಿದೆ.

ಸರ್ಫರ್‌ 20 ವರ್ಷದ ಯುವಕ ಎಂದು ಗುರುತಿಸಲಾಗಿದೆ. ಶಾರ್ಕ್ ದಾಳಿಗೆ ಒಳಗಾದ ಬಳಿಕ ಯುವಕನನ್ನು ರಕ್ಷಿಸಲು ವೈದ್ಯಕೀಯ ಸಿಬ್ಬಂದಿ ನಡೆಸಿದ ಪ್ರಯತ್ನಗಳು ಸಫಲವಾಗಲಿಲ್ಲ. ಹೆಲಿಕಾಪ್ಟರ್‌ನಲ್ಲಿ ವೈದ್ಯಕೀಯ ತಂಡ ಸಹ ಧಾವಿಸಿತ್ತು ಆದರೆ. ಸರ್ಫರ್‌ ತೀವ್ರ ಗಾಯಗೊಂಡಿದ್ದರಿಂದ ಯುವಕನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ನ್ಯೂ ಸೌಥ್‌ ವೇಲ್ಸ್‌ನ ಆಂಬುಲೆನ್ಸ್‌ ಇನ್‌ಸ್ಪೆಕ್ಟರ್‌ ಕ್ರಿಸ್‌ ವಿಲ್ಸನ್‌ ತಿಳಿಸಿದ್ದಾರೆ.

ಈ ಘಟನೆ ಬಳಿಕ, ಬೀಚ್‌ಗೆ ಜನರು ತೆರಳುವುದನ್ನು ನಿರ್ಬಂಧಿಸಲಾಗಿದೆ. ಆಸ್ಟ್ರೇಲಿಯಾದಲ್ಲಿ ಈ ವರ್ಷದಲ್ಲಿ ಇದು ಎರಡನೇ ಶಾರ್ಕ್‌ ದಾಳಿಯಾಗಿದೆ.

‘ಎಮೆರಾಲ್ಡ್‌ ಬೀಚ್‌ ಹೆಚ್ಚು ಜನಪ್ರಿಯವಾಗಿದೆ. ತಂದೆ ದಿನ ಆಚರಿಸಲು ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬೀಚ್‌ನಲ್ಲಿ ಸೇರಿದ್ದರು. ಈ ಘಟನೆಯಿಂದ ಎಲ್ಲರೂ ಆತಂಕಗೊಂಡರು’ ಎಂದು ಸ್ಥಳೀಯರು ತಿಳಿಸಿದ್ದಾರೆ.

ನ್ಯೂ ಸೌಥ್‌ವೆಲ್ಸ್‌ನಲ್ಲಿ ಕೊರೊನಾ ವೈರಸ್‌ ಕಾರಣಕ್ಕೆ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಆದರೆ, ಈಜು ಮತ್ತು ವ್ಯಾಯಾಮಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT