ಸೋಮವಾರ, ಆಗಸ್ಟ್ 2, 2021
25 °C

ವಿಶ್ವಾಸಮತದಲ್ಲಿ ಸೋಲು: ಸ್ವೀಡನ್‌ ಸರ್ಕಾರ ಪತನ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಸ್ಟಾಕ್‌ಹೋಮ್‌:‌ ಸ್ವೀಡನ್‌ ಸೋಷಿಯಲ್‌ ಡೆಮಾಕ್ರಟಿಕ್‌ ಪಕ್ಷದ ನಾಯಕ ಹಾಗೂ ಪ್ರಧಾನಿ ಸ್ಟೀಫನ್ ಲೋಫ್ವೆನ್ ಅವರು ಸೋಮವಾರ ಸಂಸತ್‌ನಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ದೇಶದ ಇತಿಹಾಸದಲ್ಲಿ ಅವಿಶ್ವಾಸ ಗೊತ್ತುವಳಿ ಮೂಲಕ ಪದಚ್ಯುತಗೊಂಡ ಮೊದಲ ಪ್ರಧಾನಿ ಎನಿಸಿಕೊಂಡಿದ್ದಾರೆ.

ಸರ್ಕಾರದ ಪಾಲುದಾರ ಪಕ್ಷವಾಗಿದ್ದರೂ, ಸರ್ಕಾರದಲ್ಲಿ ಸೇರಿಕೊಂಡಿಲ್ಲದ ಎಡ ಪಕ್ಷವು ಸರ್ಕಾರದ ಕೆಲವೊಂದು ನಿರ್ಧಾರಗಳನ್ನು ವಿರೋಧಿಸಿ ಕಳೆದ ಮಂಗಳವಾರ ಅವಿಶ್ವಾಸ ಗೊತ್ತುವಳಿ ಮಂಡಿಸಲು ಸಿದ್ಧತೆ ನಡೆಸಿತ್ತು.

ತಕ್ಷಣ ಚುನಾವಣೆ ಘೋಷಿಸುವುದು ಅಥವಾ ಉಸ್ತುವಾರಿ ಸರ್ಕಾರದ ಮುಖ್ಯಸ್ಥರಾಗಿ ಮುಂದುವರಿಯುವ ಎರಡು ಅವಕಾಶಗಳಷ್ಟೇ ಪ್ರಧಾನಿ ಸ್ಟೀಫನ್‌ ಅವರಿಗೆ ಇದೀಗ ಉಳಿದಿದ್ದು, ಒಂದು ವಾರದೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ.

2018ರಲ್ಲಿ ಎರಡನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಸ್ಟೀಫನ್‌ ಅವರು ಸೋಷಿಯಲ್‌ ಡೆಮಾಕ್ರಾಟ್ಸ್‌, ಗ್ರೀನ್ಸ್‌, ಸೆಂಟರ್‌ ಪಾರ್ಟಿ ಮತ್ತು ಲಿಬರಲ್ಸ್‌ ಪಾರ್ಟಿಯನ್ನೊಳಗೊಂಡ ಸರ್ಕಾರ ಮುಂದಾಳತ್ವವನ್ನು ವಹಿಸಿದ್ದರು. ಹೊಸದಾಗಿ ನಿರ್ಮಿಸಲಾಗಿರುವ ವಸತಿ ಸಮುಚ್ಛಯಗಳ ಬಾಡಿಗೆ ನಿಯಂತ್ರಣವನ್ನು ಸರಳಗೊಳಿಸುವ ಸರ್ಕಾರದ ನಡೆಯನ್ನು ಎಡಪಕ್ಷಗಳು ವಿರೋಧಿಸಿದ್ದೇ ಈ ರಾಜಕೀಯ ಅಸ್ಥಿರತೆಗೆ ಕಾರಣವಾಗಿದೆ. ಆದರೆ ಇದರಿಂದ ದೇಶದ ಆರ್ಥಿಕ ಕ್ಷೇತ್ರಕ್ಕೆ ಯಾವುದೇ ತೊಂದರೆ ಉಂಟಾಗದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು