ಬುಧವಾರ, ಮಾರ್ಚ್ 22, 2023
32 °C

ಚೀನಿಯರಿದ್ದ ಕಾಬೂಲ್‌ ಹೋಟೆಲ್‌ ಮೇಲೆ ದಾಳಿ: ದಾಳಿಕೋರರ ಹತ್ಯೆ

ರಾಯಿಟರ್ಸ್‌, ಎಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌, ಇಸ್ಲಾಮಾಬಾದ್‌ (ರಾಯಿಟರ್ಸ್‌, ಎಪಿ): ವಿದೇಶಿಯರು ವಾಸವಿದ್ದ ಕಾಬೂಲ್‌ನ ಕೇಂದ್ರ ಭಾಗದಲ್ಲಿರುವ ಹೋಟೆಲ್‌ವೊಂದರ ಮೇಲೆ ಸೋಮವಾರ ಗುಂಡಿನ ದಾಳಿ ನಡೆದಿದೆ, ದಾಳಿ ನಡೆಸಿದ್ದ ಮೂವರು ಶಸ್ತ್ರಧಾರಿ ವ್ಯಕ್ತಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಸೋಮವಾರ ತಾಲಿಬಾನ್‌ ಸರ್ಕಾರ ಹೇಳಿದೆ.

ಶೇರ್‌–ಎ–ನಾವ್‌ ಪ್ರದೇಶದ ಹೋಟೆಲ್‌ನ ಮಹಡಿಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ. ಈ ಕುರಿತು ಪ್ರತಿಕ್ರಿಯಿಸಿದ ತಾಲಿಬಾನ್‌ ಸರ್ಕಾರ ವಕ್ತಾರ ಜಬಿಹುಲ್ಲಾ ಮಜಾಹಿದ್‌, ‘ದಾಳಿಯಿಂದ ತಪ್ಪಿಸಿಕೊಳ್ಳಲು ಇಬ್ಬರು ವಿದೇಶಿಯರು ಕೊಠಡಿಯ ಕಿಟಕಿಯಿಂದ ಹಾರಿದ್ದರು. ಇಬ್ಬರೂ ಗಾಯಗೊಂಡಿದ್ದಾರೆ’ ಎಂದರು. ಹೋಟೆಲ್‌ ಕಟ್ಟಡದಿಂದ ಹೊಗೆ ಬರುತ್ತಿರುವ ಫೋಟೊಗಳು, ವಿಡಿಯೊಗಳು ಈ ಪ್ರದೇಶದ ನಿವಾಸಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

‘ಸಾಮಾನ್ಯವಾಗಿ ಚೀನಾದವರು ಹಾಗೂ ಇತರ ವಿದೇಶಿಯರು ಹೆಚ್ಚಿರುವ ಮಹಡಿಯಲ್ಲಿ ದಾಳಿ ನಡೆದಿದೆ. ಗುಂಡಿನ ದಾಳಿಯ ಶಬ್ದವು ನಿರಂತರವಾಗಿ ಕೇಳುತ್ತಿತ್ತು. ನಂತರ ಒಮ್ಮೆಲೆ ದೊಡ್ಡ ಸ್ಫೋಟವಾದ ಶಬ್ದ ಕೇಳಿತು’ ಎಂದು ಇದೇ ಪ್ರದೇಶದಲ್ಲಿ ವಾಸಿಸುವರೊಬ್ಬರು ಹೇಳಿದ್ದಾರೆ.

‘ಚೀನಾದ ಅತಿಥಿಗೃಹದ ಬಳಿಯೇ ದಾಳಿ ನಡೆದಿದೆ. ಕಾಬೂಲ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯು ಘಟನೆಯ ಬಗ್ಗೆ ನಿಗಾ ವಹಿಸಿದೆ’ ಎಂದು ಚೀನಾದ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ದಾಳಿಯ ಬಗ್ಗೆ ರಾಯಿಟರ್ಸ್‌ ಸುದ್ದಿ ಸಂಸ್ಥೆಗೆ ಚೀನಾ ರಾಯಭಾರ ಕಚೇರಿ ಪ್ರತಿಕ್ರಿಯಿಸಲಿಲ್ಲ.

ದಾಳಿ ಹೊಣೆಹೊತ್ತುಕೊಂಡ ಐಎಸ್‌ ಉಗ್ರ ಸಂಘಟನೆ

ಗುಂಡಿನ ದಾಳಿ ನಡೆದ ತಕ್ಷಣದಲ್ಲಿ ಯಾರೂ ದಾಳಿಯ ಹೊಣೆ ಹೊತ್ತುಕೊಳ್ಳಲಿಲ್ಲ. ಆದರೆ, ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಉಗ್ರ ಗುಂಪಿನ ಪ್ರಾದೇಶಿಕ ಗುಂಪೊಂದು ದಾಳಿಯ ಹೊಣೆ ಹೊತ್ತುಕೊಂಡಿದೆ. ಅಫ್ಘಾನಿಸ್ತಾನದ ಅಧಿಕಾರವನ್ನು ಕಳೆದ ವರ್ಷ ತಾಲಿಬಾನ್‌ ವಹಿಸಿಕೊಂಡಾದಾಗಿನಿಂದ ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ದೇಶದಲ್ಲಿ ನಿರಂತರವಾಗಿ ದಾಳಿ ನಡೆಸುತ್ತಿದೆ.

ದಾಳಿಯು ಹಲವು ಗಂಟೆಗಳ ಕಾಲ ನಡೆದಿದೆ. ಜೊತೆಗೆ, ದಾಳಿ ನಡೆಸಿದವರ ‘ಸ್ವಚ್ಛ ಗೊಳಿಸುವ’ ಕಾರ್ಯಾಚರಣೆಯೂ ನಡೆಯುತ್ತಿದೆ

ಕಾಬೂಲ್‌ನ ಪೊಲೀಸ್‌ ಮುಖ್ಯಸ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು