ಸೋಮವಾರ, ಸೆಪ್ಟೆಂಬರ್ 27, 2021
23 °C

ಅಫ್ಗಾನಿಸ್ತಾನ: ಪ್ರತಿರೋಧವಿಲ್ಲದೇ ಪ್ರಮುಖ ನಗರವನ್ನು ವಶಪಡಿಸಿಕೊಂಡ ತಾಲಿಬಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕಾಬೂಲ್‌: ಅಫ್ಗಾನಿಸ್ತಾನದ ಪೂರ್ವ ಭಾಗದ ಪ್ರಮುಖ ನಗರವಾದ ಜಲಾಲಾಬಾದ್‌ ಅನ್ನು ತಾಲಿಬಾನ್‌ ಭಾನುವಾರ ಬೆಳಿಗ್ಗೆ ವಶಪಡಿಸಿಕೊಂಡಿದೆ.

ಜಲಾಲಾಬಾದ್‌ನಲ್ಲಿ ಅಫ್ಗಾನಿಸ್ತಾನ ಸೇನೆ ತಾಲಿಬಾನ್‌ಗೆ ಯಾವುದೇ ಪ್ರತಿರೋಧ ಒಡ್ಡಿಲ್ಲ. ಹೀಗಾಗಿ, ಜಲಾಲಾಬಾದ್‌ ನಗರವು ನಿರಾಯಾಸವಾಗಿ ತಾಲಿಬಾನ್‌ ವಶವಾಗಿದೆ.

ಆ ಮೂಲಕ ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಸಂಘರ್ಷವು ಅಂತಿಮ ಘಟ್ಟ ತಲುಪುತ್ತಿರುವ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬಂದಿದೆ.

ತಾಲಿಬಾನ್‌ ಶನಿವಾರ ಮತ್ತೆ ಎರಡು ಪ್ರಮುಖ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದು, ರಾಜಧಾನಿ ಕಾಬೂಲ್‌ ಸುತ್ತುವರಿದಿದೆ.

'ಜಲಾಲಾಬಾದ್‌ನಲ್ಲಿ ಯಾವುದೇ ಘರ್ಷಣೆಗಳು ನಡೆಯುತ್ತಿಲ್ಲ. ಏಕೆಂದರೆ, ರಾಜ್ಯಪಾಲರು ತಾಲಿಬಾನ್‌ಗೆ ಶರಣಾಗಿದ್ದಾರೆ' ಎಂದು ಜಲಾಲಾಬಾದ್ ಮೂಲದ ಅಫ್ಗಾನ್‌ ಅಧಿಕಾರಿಯೊಬ್ಬರು ರಾಯಿಟರ್ಸ್‌ಗೆ ತಿಳಿಸಿದ್ದಾರೆ.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು