ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗಾನಿಸ್ತಾನದಲ್ಲಿ ಇರಾನ್ ಮಾದರಿ ಸರ್ಕಾರ: ಹೇಗಿರಲಿದೆ ಆಡಳಿತ ವ್ಯವಸ್ಥೆ?

Last Updated 3 ಸೆಪ್ಟೆಂಬರ್ 2021, 2:58 IST
ಅಕ್ಷರ ಗಾತ್ರ

ಕಾಬೂಲ್: ಅಫ್ಗಾನಿಸ್ತಾನದಲ್ಲಿ ತಾಲಿಬಾನ್‌ ನೇತೃತ್ವದ ಸರ್ಕಾರ ರಚನೆಯ ಸಿದ್ಧತೆಯ ಬಹುತೇಕ ಪೂರ್ಣಗೊಂಡಿದ್ದು, ಇರಾನ್‌ ನಾಯಕತ್ವದ ಮಾದರಿಯನ್ನು ತಾಲಿಬಾನ್‌ ಕೂಡ ಅನುಸರಿಸಲಿದೆ ಎಂದು ತಿಳಿದು ಬಂದಿದೆ.

ಏನಿದು ಇರಾನ್ ಮಾದರಿ?

ಸರ್ವೋಚ್ಚ ನಾಯಕ ಎಂದು ಪರಿಗಣಿಸಲಾಗುವ ವ್ಯಕ್ತಿಯು ದೇಶದ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರದ ಅತ್ಯುನ್ನತ ನಾಯಕ ಆಗಿರುತ್ತಾನೆ. ದೇಶದ ಅಧ್ಯಕ್ಷರಿಗಿಂತಲೂ ಈತನಿಗೆ ಮೇಲಿನ ಸ್ಥಾನ ಇರುತ್ತದೆ. ಸೇನೆ, ಸರ್ಕಾರ, ನ್ಯಾಯಾಂಗ ಎಲ್ಲದರ ಮುಖ್ಯಸ್ಥರನ್ನು ಈತ ನೇಮಿಸುತ್ತಾನೆ. ರಾಜಕೀಯ, ಧಾರ್ಮಿಕ, ಸೇನೆಗೆ ಸಂಬಂಧಿಸಿದ ಎಲ್ಲ ವ್ಯವಹಾರಗಳಲ್ಲಿ ಸರ್ವೋಚ್ಚ ನಾಯಕನ ಮಾತೇ ಅಂತಿಮ.

ಆಡಳಿತ ವ್ಯವಸ್ಥೆ ಹೇಗೆ?

ಪ್ರಾಂತ್ಯಗಳ ಆಳ್ವಿಕೆಯನ್ನು ಗವರ್ನರ್‌ಗಳು ನೋಡಿಕೊಳ್ಳಲಿದ್ದಾರೆ. ಜಿಲ್ಲೆಗಳಿಗೆ ಜಿಲ್ಲಾ ಗವರ್ನರ್‌ಗಳು ಆಡಳಿತಾಧಿಕಾರಿಗಳಾಗಿರುತ್ತಾರೆ. ಬಹುತೇಕ ಪ್ರಾಂತ್ಯಗಳ ಗವರ್ನರ್‌ಗಳ ನೇಮಕವನ್ನು ತಾಲಿಬಾನ್‌ ಪೂರ್ಣಗೊಳಿಸಿದೆ. ಪ್ರಾಂತ್ಯ ಮತ್ತು ಜಿಲ್ಲೆಗಳ ಪೊಲೀಸ್‌ ಮುಖ್ಯಸ್ಥ ಹುದ್ದೆಗಳ ನೇಮಕವೂ ಆಗಿದೆ.

ಹೊಸ ಆಡಳಿತ ವ್ಯವಸ್ಥೆಯ ಹೆಸರು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆ ಇನ್ನಷ್ಟೇ ಅಂತಿಮ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT