ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಮನೆಯಲ್ಲೇ ಇರುವಂತೆ ಒತ್ತಾಯಿಸುವ ತಾಲಿಬಾನ್ ನಡೆಗೆ ಇಲ್ಲಿದೆ ಕಾರಣ...

Last Updated 25 ಆಗಸ್ಟ್ 2021, 3:32 IST
ಅಕ್ಷರ ಗಾತ್ರ

ಕಳೆದ ಬಾರಿ ತಾಲಿಬಾನ್ ಅಧಿಕಾರದಲ್ಲಿದ್ದಾಗ ಅಫ್ಗನ್ ಮಹಿಳೆಯರಿಗೆ ಸಾಮಾನ್ಯವಾಗಿಯೇ ತೀರಾ ಅನಿವಾರ್ಯ ಪರಿಸ್ಥಿತಿಗಳನ್ನು ಹೊರತುಪಡಿಸಿದರೆ ತಮ್ಮ ಮನೆಗಳಿಂದ ಹೊರಬರಲು ಅವಕಾಶವಿರಲಿಲ್ಲ. ಹಾಗೇನಾದರೂ ನಿಯಮಗಳನ್ನು ಉಲ್ಲಂಘಿಸಿದರೆ, ಅಂತವರನ್ನು ಹೊಡೆಯುವ, ಹಿಂಸಿಸುವ ಅಥವಾ ಗಲ್ಲಿಗೇರಿಸುವ ಅಪಾಯವಿತ್ತು.

ಆದರೆ ಈ ಬಾರಿ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡಿರುವ ತಾಲಿಬಾನ್ ನಾಯಕರು ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ. ಕನಿಷ್ಠ, ಇಸ್ಲಾಂನ ಅವರ ವ್ಯಾಖ್ಯಾನದ ಮಿತಿಯೊಳಗೆ, ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ನೀಡಲಾಗುವುದು ಮತ್ತು ಹೆಣ್ಣು ಮಕ್ಕಳು ಶಾಲೆಗೆ ಹಾಜರಾಗಬಹುದು ಎಂದು ಹೇಳಿದ್ದಾರೆ.

ಆದರೆ, ಮಹಿಳೆಯರ ವಿಚಾರದಲ್ಲಿ ತಾಲಿಬಾನ್‌ನ ಹಿಂದಿನ ನಡೆಯೇ ಮಂಗಳವಾರವೂ ಮುಂದುವರಿದಿದ್ದು, ಮಹಿಳೆಯರು ಈಗಲೂ ಮನೆಯಲ್ಲೇ ಇರಬೇಕು. ಏಕೆಂದರೆ ನಿಯಮಗಳನ್ನು ಉಲ್ಲಂಘಿಸಿದವರೊಂದಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ತರಬೇತಿಯನ್ನು ಉಗ್ರಗಾಮಿಗಳಿಗೆ ನೀಡಿಲ್ಲ ಎಂದು ತಾಲಿಬಾನ್ ವಕ್ತಾರರು ಹೇಳಿಕೆ ನೀಡಿದ್ದಾರೆ.

ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಈ ನಡೆಯನ್ನು 'ತಾತ್ಕಾಲಿಕ' ನೀತಿ ಎಂದು ಕರೆದಿದ್ದು, ತಾವು ಮಹಿಳೆಯರನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದ್ದೇವೆ. ಹೊಸದಾಗಿ ಸೇರ್ಪಡೆಯಾಗಿರುವ ಮತ್ತು ಇನ್ನೂ ಚೆನ್ನಾಗಿ ತರಬೇತಿಯನ್ನು ಪಡೆಯದ ನಮ್ಮ ಪಡೆಗಳು ಮಹಿಳೆಯರನ್ನು ದುರುಪಯೋಗ ಪಡಿಸಿಕೊಳ್ಳಬಹುದೆಂದು ನಾವು ಚಿಂಚೆಗೊಳಗಾಗಿದ್ದೇವೆ. ನಮ್ಮ ಪಡೆಗಳಿಂದ ಕೆಟ್ಟದ್ದು ಸಂಭವಿಸುವುದು, ಮಹಿಳೆಯರಿಗೆ ಹಾನಿ ಮಾಡುವುದು ಅಥವಾ ಕಿರುಕುಳ ನೀಡುವುದನ್ನು ನಾವು ಬಯಸುವುದಿಲ್ಲ ಎಂದಿದ್ದಾರೆ.

'ನಾವು ಹೊಸ ನಿಯಮಗಳನ್ನು ಜಾರಿ ಮಾಡುವವರೆಗೂ' ಮಹಿಳೆಯರು ಮನೆಯಲ್ಲಿಯೇ ಇರಬೇಕು ಮತ್ತು 'ಅವರ ಸಂಬಳವನ್ನು ಅವರ ಮನೆಗಳಲ್ಲಿಯೇ ಪಾವತಿಸಲಾಗುವುದು' ಎಂದು ಮುಜಾಹಿದ್ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ತಾಲಿಬಾನ್‌ನ ಸಾಂಸ್ಕೃತಿಕ ವ್ಯವಹಾರಗಳ ಸಮಿತಿಯ ಉಪನಾಯಕ ಅಹ್ಮಾದುಲ್ಲಾ ವಾಸೆಕ್ ಅವರು ನ್ಯೂಯಾರ್ಕ್‌ ಟೈಮ್ಸ್‌ಗೆ ಪ್ರತಿಕ್ರಿಯಿಸಿ, 'ಉದ್ಯೋಗಸ್ಥ ಮಹಿಳೆಯರು ಹಿಜಾಬ್ ಧರಿಸಿದ್ದರಷ್ಟೇ ನಮ್ಮಿಂದ ಅವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ' ಎಂದು ಹೇಳಿದ್ದರು.

ಆದರೆ, 'ಸದ್ಯಕ್ಕೆ, ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಮಹಿಳೆಯರು ಮನೆಯಲ್ಲಿಯೇ ಇರುವಂತೆ ನಾವು ಕೇಳುತ್ತಿದ್ದೇವೆ. ಏಕೆಂದರೆ ಈಗ ಇದು ಮಿಲಿಟರಿ ಪರಿಸ್ಥಿತಿ' ಎಂದು ಹೇಳಿದ್ದರು.

1996 ರಿಂದ 2001 ರವರೆಗೆ ತಾಲಿಬಾನ್ ಆಳ್ವಿಕೆಯ ಮೊದಲ ವರ್ಷಗಳಲ್ಲಿ ಮಹಿಳೆಯರಿಗೆ ಮನೆಯ ಹೊರಗೆ ಕೆಲಸ ಮಾಡುವುದನ್ನು ಅಥವಾ ಪುರುಷನೊಬ್ಬ ಜೊತೆಯಿರದೆ ಮನೆಯಿಂದ ಹೊರಹೋಗುವುದನ್ನು ನಿಷೇಧಿಸಲಾಗಿತ್ತು. ಈ ವೇಳೆ ಮಹಿಳೆಯರು ಶಾಲೆಗೆ ಹಾಜರಾಗುವಂತಿರಲಿಲ್ಲ ಮತ್ತು ಅವರು ನೈತಿಕತೆಯ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದರೆ ಸಾರ್ವಜನಿಕವಾಗಿ ಹೊಡೆಯುವಿಕೆಯನ್ನು ಎದುರಿಸಬೇಕಾಗಿತ್ತು. ಕಡ್ಡಾಯವಾಗಿ ಮಹಿಳೆಯರು ಬುರ್ಖಾ ಧರಿಸಲೇಬೇಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT