ಶುಕ್ರವಾರ, ಜುಲೈ 1, 2022
25 °C

ತೈವಾನ್‌: ರೈಲು ಅಪಘಾತದಲ್ಲಿ 34 ಮಂದಿ ಸಾವು; ಹಲವರಿಗೆ ಗಾಯ

ಎಪಿ Updated:

ಅಕ್ಷರ ಗಾತ್ರ : | |

Prajavani

ತೈಪೆ: ‘ತೈವಾನ್‌ನ ಪೂರ್ವ ಕರಾವಳಿಯಲ್ಲಿ ಶುಕ್ರವಾರ ರೈಲೊಂದು ಹಳಿ ತಪ್ಪಿ, 34 ಮಂದಿ ಮೃತಪಟ್ಟಿದ್ದಾರೆ. 12ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ’ ಎಂದು ಪೊಲೀಸರು ತಿಳಿಸಿದರು. 

ಟೊರೊಕೊ ಜಾರ್ಜ್ ಪ್ರದೇಶದಲ್ಲಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ರೈಲಿನಲ್ಲಿ 350 ಪ್ರಯಾಣಿಕರಿದ್ದರು.

‘ಮೇಲ್ಸೇತುವೆಯಿಂದ ಟ್ರಕ್‌ ಆಯತಪ್ಪಿ ಕೆಳಗಿರುವ ರೈಲ್ವೆ ಹಳ್ಳಿ ಮೇಲೆ ಬಿದ್ದಿದೆ. ಇದೇ ವೇಳೆ ಸುರಂಗದೊಳಗಿನಿಂದ ಬರುತ್ತಿದ್ದ ರೈಲು, ಟ್ರಕ್‌ಗೆ ಅಪ್ಪಳಿಸಿ, ಹಳಿ ತಪ್ಪಿದೆ. ರೈಲಿನ ಹೆಚ್ಚಿನ ಭಾಗ ಈಗಲೂ ಸುರಂಗದಲ್ಲಿಯೇ ಸಿಲುಕಿದೆ. ಕೆಲವು ಪ್ರಯಾಣಿಕರು ಅಲ್ಲಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ವರದಿ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು