ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ವೀಸಾ: ಹೊಸ ನಿಯಮ

Last Updated 6 ಫೆಬ್ರುವರಿ 2023, 4:51 IST
ಅಕ್ಷರ ಗಾತ್ರ

ನವದೆಹಲಿ: ವೀಸಾ ಅರ್ಜಿಗಳ ಪರಿಷ್ಕರಣೆ, ಸಂದರ್ಶನ ಪ್ರಕ್ರಿಯೆಯಲ್ಲಿ ಆಗುತ್ತಿರುವ ವಿಳಂಬವನ್ನು ತಪ್ಪಿಸುವ ಸಲುವಾಗಿ ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ಸದ್ಯ, ಅರ್ಜಿ ಸಲ್ಲಿಸಿದ ನಂತರ ವೀಸಾಕ್ಕಾಗಿ 500 ದಿನಗಳಿಗೂ ಹೆಚ್ಚಿನ ಅವಧಿಗೆ ಕಾಯಬೇಕಾಗಿದೆ. ಹೀಗಾಗಿ, ಬಾಕಿ ಉಳಿಯುವ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿದ್ದು, ವಿದೇಶ ಪ್ರಯಾಣ ಕೈಗೊಳ್ಳುವವರು ತೊಂದರೆ ಅನುಭವಿಸುವಂತಾಗಿದೆ.

‘ಭಾರತೀಯರು ಎದುರಿಸುತ್ತಿರುವ ಈ ತೊಂದರೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ತಾವು ತೆರಳುವ ದೇಶದಲ್ಲಿರುವ ಅಮೆರಿಕದ ರಾಯಭಾರ ಅಥವಾ ಕಾನ್ಸುಲೇಟ್‌ ಕಚೇರಿಯಲ್ಲಿ ವೀಸಾ ಸಂದರ್ಶನ ಪ್ರಕ್ರಿಯೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ’ ಎಂದು ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಭಾನುವಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT