ಗುರುವಾರ , ಮಾರ್ಚ್ 4, 2021
17 °C
ಸೆನೆಟ್‌ನಲ್ಲಿ ರಿಪಬ್ಲಿಕನ್ ಪಕ್ಷದ ಸದಸ್ಯರಿಗೆ ಬಹುಮತದ ಕೊರತೆ

ಡೊನಾಲ್ಡ್ ಟ್ರಂಪ್‌ ವಾಗ್ದಂಡನೆಯಿಂದ ಖುಲಾಸೆಗೊಳ್ಳುವ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಸಂಸತ್ತಿನ ಮೇಲ್ಮನೆ (ಸೆನೆಟ್‌)ಯಲ್ಲಿ ರಿಪಬ್ಲಿಕನ್ ಪಕ್ಷದ ಸೆನಟರ್‌ಗಳ ಬೆಂಬಲದ ಕೊರತೆಯ ಕಾರಣ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಗ್ದಂಡನೆಯಿಂದ ಖುಲಾಸೆ ಆಗುವ ಸಾಧ್ಯತೆ ಇದೆ.

‘ಕ್ಯಾಪಿಟಲ್ಸ್‌’ ಮೇಲೆ ನಡೆದ ದಾಳಿಯ ಪ್ರಚೋದನೆ ಆರೋಪದ ಮೇಲೆ ಟ್ರಂಪ್ ಅವರನ್ನು ವಾಗ್ದಂಡನೆಗೆ ಒಳಪಡಿಸಲು ಡೆಮಾಕ್ರಟಿಕ್‌ ಪಕ್ಷ ಮುಂದಾಗಿದೆ. ಆದರೆ, ಸೆನೆಟ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ಸದಸ್ಯರಿಗೆ ಮೂರನೇ ಎರಡರಷ್ಟು ಬಹುಮತ ಇಲ್ಲ. ಹಾಗಾಗಿ ರಿಪಬ್ಲಿಕನ್ ಪಕ್ಷದ ಸದಸ್ಯರ ಬೆಂಬಲ ಅಗತ್ಯ. ಪ್ರಸ್ತುತ ಸೆನೆಟ್‌ನಲ್ಲಿರುವ 100 ಸ್ಥಾನಗಳಲ್ಲಿ ಡೆಮಾಕ್ರಟಿಕ್‌ ಮತ್ತು ರಿಪಬ್ಲಿಕನ್ ಪಕ್ಷಗಳು ತಲಾ 50 ಸದಸ್ಯರನ್ನು ಹೊಂದಿವೆ.  ‌

ಮೂರನೇ ಎರಡರಷ್ಟು ಬಹುಮತವಿಲ್ಲದ ಕಾರಣ ಡೆಮಾಕ್ರಟಿಕ್‌ ಪಕ್ಷಕ್ಕೆ ಕನಿಷ್ಠ 17 ಮಂದಿ ರಿಪಬ್ಲಿಕನ್ ಪಕ್ಷದ ಸೆನೆಟರ್‌ಗಳ ಬೆಂಬಲ ಬೇಕು. ಹೀಗಾಗಿ ವಾಗ್ದಂಡನೆಯಿಂದ ಟ್ರಂಪ್ ಖುಲಾಸೆಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು