ಗುರುವಾರ , ಆಗಸ್ಟ್ 11, 2022
21 °C

ಡೊನಾಲ್ಡ್‌ ಟ್ರಂಪ್‌ ವೈಜ್ಞಾನಿಕ ಸಲಹೆಗಾರ ರಾಜೀನಾಮೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವೈಜ್ಞಾನಿಕ ಸಲಹೆಗಾರ ಡಾ. ಸ್ಕಾಟ್ ಅಟ್ಲಾಸ್ ಅವರು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಈ ಬಗ್ಗೆ ಡಾ. ಸ್ಕಾಟ್ ಅಟ್ಲಾಸ್ ಅವರು ಸೋಮವಾರ ಟ್ವೀಟ್‌ ಮಾಡಿದ್ದಾರೆ.

‘ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ನರರೋಗಶಾಸ್ತ್ರಜ್ಞ ಡಾ. ಸ್ಕಾಟ್ ಅಟ್ಲಾಸ್  ಅವರಿಗೆ ಸಾರ್ವಜನಿಕ ಆರೋಗ್ಯ ಮತ್ತು ಪಿಡುಗು ಕಾಯಿಲೆಗಳ ನಿವಾರಣೆ ಬಗ್ಗೆ ಯಾವುದೇ ಅನುಭವಿಲ್ಲ. ಅವರನ್ನು ತಾತ್ಕಾಲಿಕವಾಗಿ ನೇಮಿಸಲಾಗಿತ್ತು. ಸದ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ’ ಎಂದು ಶ್ವೇತಭವನ ತಿಳಿಸಿದೆ.

ಕೊರೊನಾ ಸೋಂಕು ನಿಯಂತ್ರಣ ಕ್ರಮಗಳ ಕುರಿತಾಗಿ ಅಟ್ಲಾಸ್‌ ಮತ್ತು ಸರ್ಕಾರದ ವಿಜ್ಞಾನಿಗಳಾದ ಡಾ. ಆಂಥೋನಿ ಫೌಸಿ ಮತ್ತು ಡಾ. ಡೆಬೊರಾ ಬಿರ್ಕ್ಸ್ ವಾಗ್ವಾದ ನಡೆದಿತ್ತು. ಕೊರೊನಾ ಸೋಂಕು ನಿಯಂತ್ರಿಸಲು ಕಠಿಣ ಕ್ರಮದ ಅವಶ್ಯಕತೆಯಿಲ್ಲ ಎಂಬುದು ಅಟ್ಲಾಸ್‌ ಅವರ ವಾದವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು