ಗುರುವಾರ , ಮೇ 13, 2021
34 °C

ಕೆಲವು ಮುಸ್ಲಿಂ ದೇಶಗಳ ಮೇಲೆ ಸಂಚಾರ ನಿರ್ಬಂಧ ಮತ್ತೆ ಜಾರಿಗೆ ತನ್ನಿ: ಟ್ರಂಪ್‌

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ತೀವ್ರಗಾಮಿ ಇಸ್ಲಾಮಿಕ್‌ ಭಯೋತ್ಪಾದನೆಯಿಂದ ಅಮೆರಿಕವನ್ನು ಸುರಕ್ಷಿತವಾಗಿ ಇಡುವ ಸಲುವಾಗಿ ಕೆಲವು ಮುಸ್ಲಿಂ ದೇಶಗಳ ಮೇಲೆ ಈ ಹಿಂದೆ ವಿಧಿಸಲಾಗಿದ್ದ ಸಂಚಾರ ನಿರ್ಬಂಧವನ್ನು ಮತ್ತೆ ಜಾರಿಗೆ ತರಬೇಕು ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಒತ್ತಾಯಿಸಿದ್ದಾರೆ.

‘ಅಧ್ಯಕ್ಷ ಜೋ ಬೈಡನ್‌ ಅವರು ದೇಶವನ್ನು ತೀವ್ರಗಾಮಿ ಇಸ್ಲಾಮಿಕ್‌ ಭಯೋತ್ಪಾದನೆಯಿಂದ ಸುರಕ್ಷಿತವಾಗಿ ಇಡಬೇಕು ಎಂದು ಭಾವಿಸಿದ್ದೇ ಆದರೆ ಅವರು ವಿದೇಶ ಸಂಚಾರ ನಿರ್ಬಂಧವನ್ನು ಮತ್ತೆ ಅಳವಡಿಸಬೇಕು, ಜತೆಗೆ ನಿರಾಶ್ರಿತರಿಗೆ ನಿರ್ಬಂಧ ವಿಧಿಸುವುದನ್ನೂ ಸೇರಿಸಬೇಕು. ನಾನು ಅದನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೆ’ ಎಂದು ಟ್ರಂಪ್‌ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಇಡೀ ಜಗತ್ತಿನಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ. ಆನ್‌ಲೈನ್‌ನಲ್ಲೇ ಉಗ್ರರ ನೇಮಕಾತಿ ನಡೆಯುತ್ತಿದೆ. ಅಮೆರಿಕದಿಂದ ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳನ್ನು ದೂರ ಇರಿಸಬೇಕಾದರೆ ನಾವು ಸಾಮಾನ್ಯ ಜ್ಞಾನವನ್ನು ಅಳವಡಿಸಿಕೊಳ್ಳಬೇಕು, ಯುರೋಪ್‌ನಲ್ಲಿ ಮತ್ತು ನನ್ನ ಆಡಳಿತಕ್ಕಿಂತ ಮೊದಲು ಅಮೆರಿಕದಲ್ಲಿ ಮಾಡಲಾದ ವಲಸೆ ನೀತಿಗಳಲ್ಲಿನ ತಪ್ಪುಗಳನ್ನು ಪುನರಾವರ್ತನೆ ಮಾಡಬಾರದು’ ಎಂದು ಅವರು ಕೇಳಿಕೊಂಡಿದ್ದಾರೆ.

ಟ್ರಂಪ್‌ ಅವರ ಅಧಿಕಾರ ಅವಧಿಯಲ್ಲಿ ಇರಾನ್‌, ಇರಾಕ್‌, ಲಿಬಿಯಾ, ಸೊಮಾಲಿಯಾ, ಸುಡಾನ್‌, ಸಿರಿಯಾ, ಯೆಮನ್‌ ನಂತಹ ದೇಶಗಳ ಮೇಲೆ ಸಂಚಾರ ನಿರ್ಬಂಧ ವಿಧಿಸಲಾಗಿತ್ತು.  ಬೈಡನ್‌ ಅಧಿಕಾರ ವಹಿಸಿಕೊಂಡ ಬಳಿಕ ಈ ನಿರ್ಬಂಧವನ್ನು ತೆರವುಗೊಳಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು