ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಸಮುದ್ರದಲ್ಲಿ ಭಾರಿ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ ಮಾಡಿದ ಟರ್ಕಿ

Last Updated 22 ಆಗಸ್ಟ್ 2020, 1:49 IST
ಅಕ್ಷರ ಗಾತ್ರ

ಅಂಕಾರ: ಟರ್ಕಿಯ ಹಡಗು ಫಾತಿಹ್‌ (ಕೊರೆಯುವಿಕೆ ಹಡಗು) ಕಪ್ಪು ಸಮುದ್ರದಲ್ಲಿ 320 ಶತಕೋಟಿ ಘನ ಮೀಟರ್ ನೈಸರ್ಗಿಕ ಅನಿಲವನ್ನು ಕಂಡುಹಿಡಿದಿರುವುದಾಗಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಶುಕ್ರವಾರ ಹೇಳಿದ್ದಾರೆ.

'ಟರ್ಕಿಯು ಕಪ್ಪು ಸಮುದ್ರದಲ್ಲಿ ಅತಿದೊಡ್ಡ ನೈಸರ್ಗಿಕ ಅನಿಲದ ದಾಸ್ತಾನನ್ನು ಆವಿಷ್ಕಾರ ಮಾಡಿದೆ. 2023ರ ಹೊತ್ತಿಗೆ ಇದು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ನಿಕ್ಷೇಪ ಬಳಕೆಗೆ ಲಭ್ಯವಾದರೆ, ದೇಶದ ಇಂಧನ ಆಮದು ಪ್ರಮಾಣ ಭಾರಿ ಪ್ರಮಾಣದಲ್ಲಿ ತಗ್ಗಲಿದೆ’ ಎಂದು ಎರ್ಡೊಗನ್‌ ಅವರು ಇಸ್ತಾಂಬುಲ್‌ನ ಐತಿಹಾಸಿಕ ಡಾಲ್ಮಾಬಾಹ್ಸ್ ಅರಮನೆಯಲ್ಲಿ ಹೇಳಿರುವುದಾಗಿ ಸುದ್ದಿ ಸಂಸ್ಥೆ ‘ಅನಾಡೋಲು’ ವರದಿ ಮಾಡಿದೆ.

‘ಈ ಮೊದಲ ಬಾವಿಯಲ್ಲಿ ಪತ್ತೆಯಾಗಿರುವ ನಿಕ್ಷೇಪವು ಶ್ರೀಮಂತ ಸಂಪನ್ಮೂಲದ ಭಾಗವಾಗಿದೆ’ ಎಂದು ಎರ್ಡೊಗನ್ ಹೇಳಿದ್ದಾರೆ.

ಮೆಡಿಟರೇನಿಯನ್ ಸಮುದ್ರದಲ್ಲಿ ಟರ್ಕಿ ಕೈಗೊಂಡಿರುವ ಪರಿಶೋಧನೆಯಲ್ಲೂ ಇದೇ ರೀತಿಯ ಒಳ್ಳೆಯ ಸುದ್ದಿ ಬರಲಿದೆ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊರೆಯುವಿಕೆ ಹಡಗು ಫಾತಿಹ್‌ ಕಪ್ಪು ಸಮುದ್ರದಲ್ಲಿ ಜುಲೈ 20ರಿಂದಲೇ ಕೊರೆಯುವ ಕೆಲಸ ಆರಂಭಿಸಿತ್ತು ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT