ನ್ಯೂಯಾರ್ಕ್: ಪರಿಚಿತರು ಪರಸ್ಪರ ಗುಂಡಿನ ಕಾಳಗ ಮಾಡಿಕೊಂಡಿದ್ದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕ್ಯಾಲಿಪೋರ್ನಿಯಾ ರಾಜ್ಯದ ಸಕ್ರಾಮಂಟೊದಲ್ಲಿನ ಗುರುದ್ವಾರದಲ್ಲಿ ನಡೆದಿದೆ.
ಭಾನುವಾರ ಮಧ್ಯಾಹ್ನ 2.35ರ ಸುಮಾರು ಈ ಘಟನೆ ನಡೆದಿದ್ದು, ಒಬ್ಬ ಗಾಯಾಳುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದರೆ, ಇನ್ನೊಬ್ಬ ಓಡಿಹೋಗಿದ್ದಾನೆ. ಆತ ಭಾರತೀಯ ಮೂಲದವನಿರಬಹುದು ಎಂದು ಶಂಕಿಸಿದ್ದಾರೆ.
ಗುಂಡಿನ ಕಾಳಗಕ್ಕೆ ಕಾರಣ ತಿಳಿದು ಬಂದಿಲ್ಲವಾದರೂ ಇದು ಇಬ್ಬರು ಪರಸ್ಪರ ಪರಿಚಿತರು ವೈಯಕ್ತಿಕ ದ್ವೇಷದಿಂದ ಹೀಗೆ ಮಾಡಿರಬಹುದು. ಈ ವೇಳೆ ಮೂವರಿದ್ದರು ಎಂದು ಸಕ್ರಾಮಂಟೊ ಕೌಂಟಿ ಪೊಲೀಸ್ ಇಲಾಖೆ ವಕ್ತಾರ ಅಮರ್ ಗಾಂಧಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಕ್ರಾಮಂಟೊ ಸಿಖ್ ಸಮುದಾಯ ಇದೇ ಗುರುದ್ವಾರದಲ್ಲಿ ಭಾನುವಾರ ನಗರ ಕೀರ್ತನಾ ಪರೇಡ್ ಆಯೋಜನೆ ಮಾಡಿತ್ತು.
ಗುಂಡಿನ ಕಾಳಗವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇನ್ನೊಬ್ಬ ಆರೋಪಿಯನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.