ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಬುಧಾಬಿಯ ರಾಜಕುಮಾರನಾಗಿ ಪುತ್ರನನ್ನು ನೇಮಿಸಿದ ಯುಎಇ ದೊರೆ ಮೊಹಮ್ಮದ್‌

ಪ್ರಮುಖ ಹುದ್ದೆಗಳಿಗೆ ಸಂಬಂಧಿಕರನ್ನು ನೇಮಿಸಿದ ಮೊಹಮ್ಮದ್‌
Last Updated 30 ಮಾರ್ಚ್ 2023, 4:21 IST
ಅಕ್ಷರ ಗಾತ್ರ

ಅಬುಧಾಬಿ: ಸಂಯುಕ್ತ ಅರಬ್‌ ಸಂಸ್ಥಾನದ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಝಾಯೇದ್‌ ಅಲ್‌ ನಹ್ಯಾನ್‌ ಅವರು ತಮ್ಮ ಹಿರಿಯ ಪುತ್ರ ಶೇಖ್‌ ಖಾಲಿದ್‌ ಅವರನ್ನು ಅಬುಧಾಬಿಯ ರಾಜಕುಮಾರನನ್ನಾಗಿ ನೇಮಕ ಮಾಡಿದ್ದಾರೆ.

ಜತೆಗೆ ತಮ್ಮ ಸಹೋದರ ಶೇಖ್‌ ಮನ್ಸೂರ್‌ ಬಿನ್‌ ಝಾಯೇದ್ ಅಲ್‌ ನಹ್ಯಾನ್‌ ಹಾಗೂ ಶೇಖ್‌ ಮೊಹಮ್ಮದ್‌ ಬಿನ್‌ ರಾಶಿದ್‌ ಅಲ್ ಮಖ್ತೂಮ್ ಅವರನ್ನು ಯುಎಇಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ.

52 ವರ್ಷದ ಮನ್ಸೂರ್‌ ಅವರು ಖ್ಯಾತ ಫುಟ್‌ಬಾಲ್‌ ಕ್ಲಬ್‌ ಮ್ಯಾಂಚೆಸ್ಟರ್‌ ಸಿಟಿ ಕ್ಲಬ್‌ನ ಮಾಲೀಕರಾಗಿದ್ದಾರೆ.

ಸದ್ಯ ಯುಎಇಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ADQ ಸಾರ್ವಭೌಮ ಸಂಪತ್ತು ನಿಧಿಯ ಅಧ್ಯಕ್ಷರಾಗಿರುವ ತಮ್ಮೊಬ್ಬ ಸಹೋದರ ಶೇಖ್‌ ತಹ್ನೌನ್‌ ಹಾಗೂ ಹಜ್ಜಾ ಬಿನ್‌ ಝಾಯೇದ್‌ ಅವರನ್ನು ಅಬುಧಾಬಿಯ ಉಪ ಆಡಳಿತಗಾರನನ್ನಾಗಿ ನೇಮಕ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT