ಬುಧವಾರ, ಸೆಪ್ಟೆಂಬರ್ 28, 2022
26 °C

ಕೊರೊನಾ ಮೂಲ ತಳಿ, ಓಮೈಕ್ರಾನ್ ವಿರುದ್ಧ ರಕ್ಷಣೆ ಒದಗಿಸುವ ಲಸಿಕೆಗೆ ಬ್ರಿಟನ್ ಅಸ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಕೊರೊನಾದ ಮೂಲ ಮತ್ತು ಓಮೈಕ್ರಾನ್ ರೂಪಾಂತರ ತಳಿಯಿಂದ ರಕ್ಷಣೆ ಒದಗಿಸುವ ದ್ವಿಗುಣ ಒಳಗೊಂಡಿರುವ ಲಸಿಕೆಗೆ ಮುನ್ನೆಚ್ಚರಿಕೆ ಡೋಸ್‌ಗಾಗಿ ಅನುಮೋದನೆ ನೀಡಲಾಗಿದೆ ಎಂದು ಬ್ರಿಟನ್‌ನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾಡೆರ್ನಾ ಕಂಪನಿಯ ಲಸಿಕೆಯು ಸುರಕ್ಷತೆ, ಗುಣಮಟ್ಟ ಮತ್ತು ಪರಿಣಾಮಕಾರಿತ್ವದ ಮಾನದಂಡಗಳನ್ನು ಪೂರೈಸಿದ್ದು, ಕೊರೊನಾ ವೈರಸ್ ವಿರುದ್ಧ ತೀಕ್ಷ್ಣ ಸಾಧನವಾಗಿದೆ ಎಂದು ಔಷಧಿ ಮತ್ತು ಆರೋಗ್ಯ ಕಾಳಜಿ ಉತ್ಪನ್ನಗಳ ನಿಯಂತ್ರಣ ಸಂಸ್ಥೆ(ಎಂಎಚ್‌ಆರ್‌ಎ) ಹೇಳಿದೆ.

‘Spikevax bivalent Original/Omicron’ಎಂದು ಕರೆಯಲಾಗುವ ಲಸಿಕೆಯ ಅರ್ಧ ಭಾಗವು(25 ಮೈಕ್ರೊ ಗ್ರಾಂ) 2020ರ ಮೂಲ ಕೊರೊನಾ ವೈರಸ್ ಸೋಂಕಿನ ವಿರುದ್ಧ ಮತ್ತು ಉಳಿದರ್ಧ ಭಾಗವು(25 ಮೈಕ್ರೊ ಗ್ರಾಂ) ಓಮೈಕ್ರಾನ್‌ನಿಂದ ರಕ್ಷಣೆ ಒದಗಿಸುತ್ತದೆ.

‘ಕ್ಲಿನಿಕಲ್ ಪ್ರಯೋಗದಲ್ಲಿ ಓಮೈಕ್ರಾನ್ ಬಿಎ.1 ರೂಪಾಂತರ ಮತ್ತು 2020ರ ಮೂಲ ಕೊರೊನಾ ಸೋಂಕಿನ ವಿರುದ್ಧ ಬಲವಾದ ಪ್ರತಿರಕ್ಷಣೆಯನ್ನು ಒದಗಿಸುವಲ್ಲಿ ಸಫಲವಾಗಿರುವ ಮಾಡೆರ್ನಾ ಬೈವೆಲೆಂಟ್ ಬೂಸ್ಟರ್ ಲಸಿಕೆಯ ಅನುಮೋದನೆಯನ್ನು ಘೋಷಿಸಲು ನನಗೆ ಅತ್ಯಂತ ಸಂತೋಷವಾಗಿದೆ’ಎಂದು ಎಂಎಚ್‌ಆರ್‌ಎ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಜೂನ್ ರೈನ್ ತಿಳಿಸದರು.

‘ಬ್ರಿಟನ್‌ನಲ್ಲಿ ಬಳಸಲಾಗುತ್ತಿರುವ ಮೊದಲ ತಲೆಮಾರಿನ ಕೋವಿಡ್-19 ಲಸಿಕೆಗಳು ರೋಗದ ವಿರುದ್ಧ ಪ್ರಮುಖ ರಕ್ಷಣೆ ನೀಡುವುದು ಮತ್ತು ಜೀವಗಳನ್ನು ಉಳಿಸುವುದನ್ನು ಮುಂದುವರಿಸುತ್ತವೆ. ಈ ದ್ವಿಗುಣ ಲಸಿಕೆಯು ವಿಕಸನಗೊಳ್ಳುತ್ತಲೇ ಇರುವ ವೈರಸ್‌ನಿಂದ ನಮ್ಮನ್ನು ರಕ್ಷಿಸುವ ತೀಕ್ಷ್ಣವಾದ ಸಾಧನವಾಗಿದೆ’ಎಂದು ಅವರು ಹೇಳಿದರು.

ಬೂಸ್ಟರ್ ಡೋಸ್‌ಗೆ ಮಾಡೆರ್ನಾ ಕಂಪನಿಯ ಲಸಿಕೆಗೆ ಅನುಮೋದನೆ ನೀಡುವ ನಿರ್ಧಾರವನ್ನು ಸರ್ಕಾರದ ಸ್ವತಂತ್ರ ತಜ್ಞ ವೈಜ್ಞಾನಿಕ ಸಲಹಾ ಸಂಸ್ಥೆ ಮತ್ತು ಔಷಧಿಗಳ ಆಯೋಗವು ಪ್ರಯೋಗದ ಫಲಿತಾಂಶಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ ಅನುಮೋದಮೆ ನೀಡಿದೆ ಎಂದು ಎಂಎಚ್‌ಆರ್‌ಎ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು