ಲಂಡನ್: ವಿಶ್ವಾಸಮತ ಗೆದ್ದ ಬ್ರಿಟನ್ ಪ್ರಧಾನಿ, ಪಕ್ಷದ ನಾಯಕತ್ವ ಆಬಾಧಿತ

ಲಂಡನ್: ಕನ್ಸರ್ವೇಟಿವ್ ಪಕ್ಷದ ನಾಯಕತ್ವ ಕುರಿತಂತೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ವಿರುದ್ಧ ಮಂಡನೆಯಾಗಿದ್ದ ಅವಿಶ್ವಾಸ ನಿರ್ಣಯದಲ್ಲಿ ಗೆಲುವು ಸಾಧಿಸಿದ್ದಾರೆ. ಪಕ್ಷದ 211 ಸಂಸದರು ಜಾನ್ಸನ್ ಅವರ ನಾಯಕತ್ವಕ್ಕೆ ಬೆಂಬಲ ಸೂಚಿಸಿದರು.
ಸಂಸತ್ತಿನಲ್ಲಿ ಸೋಮವಾರ ತಡರಾತ್ರಿ ನಿರ್ಣಯದ ಮೇಲೆ ಮತದಾನ ನಡೆಯಿತು. ಜಾನ್ಸನ್ ನಾಯಕತ್ವದ ವಿರುದ್ಧ 148 ಸದಸ್ಯರು ಹಕ್ಕು ಚಲಾಯಿಸಿದರು. ಈ ಫಲಿತಾಂಶದ ಮೂಲಕ ಆಡಳಿತರೂಢ ಕನ್ಸರ್ವೇಟಿವ್ ಪಕ್ಷದಲ್ಲಿ ಪಕ್ಷದ ನಾಯಕತ್ವ ಕುರಿತಂತೆ ಬೋರಿಸ್ ಜಾನ್ಸನ್ ಸ್ಥಾನ ಆಬಾಧಿತವಾಗಿದೆ.
ಫಲಿತಾಂಶ ಕುರಿತು ಪ್ರತಿಕ್ರಿಯಿಸಿದ ಜಾನ್ಸನ್ ಅವರು, ‘ರಾಜಕಾರಣ ಮತ್ತು ದೇಶದ ಹಿತದೃಷ್ಟಿಯಿಂದ ಇದು ಅತ್ಯುತ್ತಮ ಫಲಿತಾಂಶವಾಗಿದೆ’ ಎಂದು ಹೇಳಿದರು.
ಇದು ನಿರ್ಣಾಯಕ ಹಾಗೂ ಸಮಾಧಾನ ನೀಡಬಹುದಾದ ಫಲಿತಾಂಶ. ಇದರ ಅರ್ಥ, ಸರ್ಕಾರವು ನಾವು ಇನ್ನು ಜನರಿಗೆ ಸಂಬಂಧಿಸಿದ ವಿಷಯಗಳತ್ತ ಗಮನಹರಿಸಲು ನೆರವಾಗಲಿದೆ. ನನಗೆ, ನನ್ನದೇ ಪಕ್ಷದ ಸಂಸದರಿಂದ ಉತ್ತಮ ತೀರ್ಪು ವ್ಯಕ್ತವಾಗಿದೆ. 2019ಕ್ಕಿಂತಲೂ ಹೆಚ್ಚಿನ ಶಕ್ತಿ ಬಂದಿದೆ’ ಎಂದು ತಿಳಿಸಿದರು.
ಗೌಪ್ಯ ಮತದಾನ ನಡೆದಿದ್ದು, ನಾಯಕತ್ವ ಉಳಿಸಿಕೊಳ್ಳಲು ಜಾನ್ಸನ್ ಅವರು ಕನಿಷ್ಠ 180 ಸದಸ್ಯರ ಬೆಂಬಲ ಪಡೆಯಬೇಕಿತ್ತು. ಕನ್ಸರ್ವೇಟಿವ್ ಪಕ್ಷದ ಒಟ್ಟು ಸದಸ್ಯ ಬಲ 359 ಆಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.