ಶುಕ್ರವಾರ, ಡಿಸೆಂಬರ್ 2, 2022
21 °C

ತೆರಿಗೆ ಕಡಿತ ನೀತಿ ಹಿಂಪಡೆದ ಬ್ರಿಟನ್‌ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌ (ಪಿಟಿಐ): ಲಿಜ್‌ ಟ್ರಸ್‌ ನೇತೃತ್ವದ ಬ್ರಿಟನ್‌ ಸರ್ಕಾರವು ಮುಂದಿನ ವರ್ಷದ ಏಪ್ರಿಲ್‌ನಿಂದ ಜಾರಿಗೊಳಿಸಲು ಉದ್ದೇಶಿಸಿದ್ದ ತೆರಿಗೆ ಕಡಿತ ನೀತಿಯನ್ನು ಸೋಮವಾರ ಹಿಂದಕ್ಕೆ ಪಡೆದಿದೆ.

ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್‌ ಅವರು ಹೋದ ತಿಂಗಳು ಮಂಡಿಸಿದ್ದ ಮಿನಿ ಬಜೆಟ್‌ನಲ್ಲಿ ಶೇ 45ರಷ್ಟು ಆದಾಯ ತೆರಿಗೆ ದರ ಕಡಿತಗೊಳಿಸುವ ಯೋಜನೆ ಪ್ರಕಟಿಸಿದ್ದರು. ಇದಕ್ಕೆ ಕನ್ಸರ್ವೇಟಿವ್‌ ಪಕ್ಷದ ಸಂಸದರಿಂದಲೇ ವಿರೋಧ ವ್ಯಕ್ತವಾಗಿತ್ತು. ಸರ್ಕಾರದ ಈ ನಿರ್ಧಾರದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಸೃಷ್ಟಿಯಾಗಿತ್ತು. 

‘ನಾಗರಿಕರ ಜೊತೆ ನಾವು ಮಾತನಾಡಿದ್ದೇವೆ. ಅವರ ಅಭಿಪ್ರಾಯಗಳನ್ನು ಆಲಿಸಿದ್ದೇವೆ. ಅವರ ಮನವಿ ಮೇರೆಗೆ ತೆರಿಗೆ ಕಡಿತ ನೀತಿ ಹಿಂದಕ್ಕೆ ಪಡೆಯುತ್ತಿದ್ದೇವೆ. ಆರ್ಥಿಕ ಬೆಳವಣಿಗೆ ಯೋಜನೆ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಿದ್ದೇವೆ. ನಾಗರಿಕರ ವಿರೋಧಕ್ಕೆ ಮಣಿದು ಸರ್ಕಾರವು ತನ್ನ ನೀತಿಯನ್ನು ಹಿಂಪಡೆದ ಹಲವು ನಿದರ್ಶನಗಳು ನಮ್ಮ ಎದುರಿಗಿವೆ. ಹೀಗಾಗಿ ನಮ್ಮ ನಿರ್ಧಾರದಿಂದ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದು ಭಾವಿಸಬೇಕಿಲ್ಲ’ ಎಂದು ಕ್ವಾರ್ಟೆಂಗ್‌ ಹೇಳಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು