ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌: ಏಪ್ರಿಲ್‌ನಿಂದ ಕೋವಿಡ್‌ ನಿರ್ಬಂಧಗಳು ಅಂತ್ಯ

Last Updated 22 ಫೆಬ್ರುವರಿ 2022, 12:51 IST
ಅಕ್ಷರ ಗಾತ್ರ

ಲಂಡನ್‌: ’ಕೋವಿಡ್‌ ಜತೆ ಬದುಕುವ‘ ಕಾರ್ಯತಂತ್ರ ರೂಪಿಸಿರುವ ಬ್ರಿಟನ್‌ ಸರ್ಕಾರ, ಸಾಂಕ್ರಾಮಿಕ ತಡೆಗಟ್ಟಲು 2020ರ ಮಾರ್ಚ್‌ನಿಂದ ಜಾರಿಗೊಳಿಸಿದ್ದ ಬಹುತೇಕ ಎಲ್ಲಾತಾತ್ಕಾಲಿಕ ಕಾನೂನುಗಳು ಮುಂದಿನ ತಿಂಗಳಿಂದ ರದ್ದಾಗಲಿವೆ ಎಂದು ಪ್ರಧಾನಿ ಬೋರಿಸ್‌ ಜಾನ್ಸನ್‌ ಘೋಷಿಸಿದ್ದಾರೆ.

ಸೋಂಕುದೃಢಪಟ್ಟವರು ಕ್ವಾರಂಟೈನ್‌ಗೆ ಒಳಗಾಗುವ ನಿಯಮಇದೇ 24ರಿಂದ ಕೊನೆಗೊಳ್ಳಲಿದೆ. ಅಲ್ಲದೆಏಪ್ರಿಲ್‌ ಒಂದರಿಂದ ಕೊರೊನಾ ಸೋಂಕು ಪತ್ತೆಗೆ ಉಚಿತವಾಗಿ ತಪಾಸಣೆ ಮಾಡುವುದನ್ನು ಸ್ಥಗಿತಗೊಳಿಸಲಾಗುತ್ತದೆ. ಸೋಂಕಿತರ ಸಂಪರ್ಕವನ್ನು ಪತ್ತೆ ಹಚ್ಚುವ ಕಾರ್ಯ, ಲಸಿಕೆ ಪ್ರಮಾಣ ಪತ್ರ ಪರಿಶೀಲನೆ, ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ಬಾರಿ ಸೋಂಕು ತಪಾಸಣೆ ಮತ್ತು ಮಾರ್ಗದರ್ಶನವೂ ಕೊನೆಗೊಳ್ಳುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ ಇನ್ನೂ ಹೋಗಿಲ್ಲ. ಕೆಲವು ನಿರ್ಬಂಧಗಳನ್ನು ಮಾತ್ರ ವಾಪಸ್‌ ಪಡೆಯುತ್ತಿದ್ದು, ಸೋಂಕು ಇರುವವರಿಗೂ ಹಲವು ನಿರ್ಬಂಧಗಳು ಮುಂದುವರಿಯಲಿವೆ ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಮತ್ತು ಮರಣ ಪ್ರಮಾಣದಲ್ಲಿ ಇಳಿಕೆಯಾಗಿದೆ. ಲಸಿಕೆ ನೀಡುವುದರಲ್ಲಿ ಶೇ 92ರಷ್ಟು ಸಾಧನೆಲಾಗಿದೆ. 12 ವರ್ಷ ಮೇಲ್ಪಟ್ಟವರಿಗೂ ಮೊದಲ ಡೋಸ್‌ ನೀಡಲಾಗಿದೆ. ಶೇ 85ರಷ್ಟು ಮಂದಿಗೆ ಎರಡನೇ ಡೋಸ್‌ ಮತ್ತು ಶೇ 66ರಷ್ಟು ಮಂದಿಗೆ ಬೂಸ್ಟರ್‌ ಡೋಸ್‌ ನೀಡಲಾಗಿದೆ. ಮುಂದಿನ ತಿಂಗಳು 75 ವರ್ಷ ಮೇಲ್ಪಟವರಿಗೆ ಹಾಗೂ ದುರ್ಬಲರಿಗೆ ನಾಲ್ಕನೇ ಬೂಸ್ಟರ್‌ ಡೋಸ್‌ ನೀಡಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT