ಶನಿವಾರ, ಮೇ 28, 2022
22 °C

USSR ನಂತರದ ಉಕ್ರೇನ್‌ನ ಮೊದಲ ಅಧ್ಯಕ್ಷ ಲಿಯೊನೆಡ್ ಕ್ರಾವ್‌ಚುಕ್ ನಿಧನ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕೀವ್: ಸೋವಿಯತ್ ಯೂನಿಯನ್‌ನಿಂದ (USSR) ಉಕ್ರೇನ್ ಸ್ವಾತಂತ್ರ್ಯಗೊಂಡ ನಂತರ ಉಕ್ರೇನ್‌ನ ಮೊದಲ ಅಧ್ಯಕ್ಷರಾಗಿದ್ದ ಲಿಯೊನೆಡ್ ಕ್ರಾವ್‌ಚುಕ್ ಅವರು ತಮ್ಮ 88 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

‘ಇದೊಂದು ಆಘಾತಕಾರಿ ಸುದ್ದಿ ಹಾಗೂ ಉಕ್ರೇನ್‌ಗೆ ತುಂಬಲಾರದ ನಷ್ಟ’ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝಲೆನ್‌ಸ್ಕಿ ಅವರು ಹೇಳಿದ್ದಾರೆ.

ಮಾಜಿ ಕಮ್ಯೂನಿಸ್ಟ್ ನಾಯಕರಾಗಿದ್ದ ಲಿಯೊನೆಡ್ ಕ್ರಾವ್‌ಚುಕ್ ಅವರು ಸೋವಿಯತ್ ಯೂನಿಯನ್‌ನಿಂದ 1991 ರಲ್ಲಿ ಉಕ್ರೇನ್‌ ಬೇರ್ಪಡೆಯಾಗುವ ನೇತೃತ್ವ ವಹಿಸಿದ್ದರು. ಅದಕ್ಕಾಗಿ ಅವರೇ ಸಹಿ ಮಾಡಿದ್ದರು.

ಇತ್ತೀಚೆಗೆ ರಷ್ಯಾ ಉಕ್ರೇನ್‌ ಮೇಲೆ ಆಕ್ರಮಣ ಮಾಡಿದ್ದಕ್ಕೆ ತೀವ್ರ ನೊಂದುಕೊಂಡಿದ್ದ ಲಿಯೊನೆಡ್ ಅವರು, ‘ರಷ್ಯಾ ಆಕ್ರಮಣ ಮಾಡಿರುವುದರಲ್ಲಿ ಆಶ್ಚರ್ಯವಿಲ್ಲ. ಏಕೆಂದರೆ ಅದು ಉಕ್ರೇನ್‌ನ್ನು ನಿರ್ನಾಮ ಮಾಡುವ ಗುರಿಯನ್ನೇ ಹೊಂದಿದೆ’ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು