ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ನೆರವು ನೀಡುವಂತೆ ಪಾಶ್ಚಿಮಾತ್ಯ ದೇಶಗಳಿಗೆ ಝೆಲೆನ್‌ಸ್ಕಿ ಮನವಿ

Last Updated 11 ಆಗಸ್ಟ್ 2022, 13:30 IST
ಅಕ್ಷರ ಗಾತ್ರ

ಕೋಪನ್‌ಹೇಗನ್‌: ‘ಕಳೆದ ಐದೂವರೆ ತಿಂಗಳಿಂದ ನಿರಂತರವಾಗಿ ಯುದ್ಧ ನಡೆಯುತ್ತಿದೆ. ರಷ್ಯಾ ಪಡೆಗಳನ್ನು ಹಿಮ್ಮೆಟಿಸಲು ನಮಗೆ ಹಣದ ಅವಶ್ಯಕತೆ ಇದೆ. ಆದ್ದರಿಂದ, ನಮ್ಮ ಸೇನೆಯ ಬಲ ಹೆಚ್ಚಿಸಿಕೊಳ್ಳಲು ಪಾಶ್ಚಿಮಾತ್ಯ ದೇಶಗಳು ಇನ್ನಷ್ಟು ನೆರವು ನೀಡಬೇಕು’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಮನವಿ ಮಾಡಿದ್ದಾರೆ.

ಉಕ್ರೇನ್‌, ಡೆನ್ಮಾರ್ಕ್‌ ಮತ್ತು ಬ್ರಿಟನ್‌ ರಕ್ಷಣಾ ಸಚಿವರು ಗುರುವಾರ ಆಯೋಜಿಸಿದ್ದ ‘ಉಕ್ರೇನ್‌ಗೆ ದೇಣಿಗೆದಾರರ ಸಮಾವೇಶ’ದಲ್ಲಿ ಅವರು ವಿಡಿಯೊ ಸಂವಾದದ ಮೂಲಕ ಮಾತನಾಡಿದರು. ಆಯುಧಗಳ ಖರೀದಿಗೆ, ಸೇನೆಯ ತರಬೇತಿಗಾಗಿ ಉಕ್ರೇನ್‌ಗೆ ಹಣಕಾಸಿನ ನೆರವು ನೀಡುವ ದೃಷ್ಟಿಯಿಂದ ಸಮಾವೇಶವನ್ನು ಆಯೋಜಿಸಲಾಗಿತ್ತು.

‘ನಾವು ಎಷ್ಟು ಬೇಗ ರಷ್ಯಾವನ್ನು ಹಿಮ್ಮೆಟ್ಟಿಸುತ್ತೇವೊ, ಅಷ್ಟು ಬೇಗ ನಾವು ಸುರಕ್ಷಿತ’ ಎಂದುಝೆಲೆನ್‌ಸ್ಕಿ ಹೇಳಿದರು.

ಸಭೆಗೆ ಹಾಜರಾಗಿದ್ದ ಉಕ್ರೇನ್‌ನ ರಕ್ಷಣಾ ಸಚಿವ ಒಲೆಕ್ಸಿ ರೆಜ್ನಿಕೋವ್‌ ಪತ್ರಕರ್ತರೊಂದಿಗೆ ಮಾತನಾಡಿ, ‘ಮೊದಲ ಹಂತದಲ್ಲಿ ನಮಗೆ ಯುದ್ಧ ವಿಮಾನಗಳ ಅವಶ್ಯಕತೆ ಇದೆ. ನಂತರದಲ್ಲಿ ನೆಲಬಾಂಬ್‌ಗಳನ್ನು ಪತ್ತೆ ಮಾಡುವ ಮತ್ತು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸ ಆಗಬೇಕು’ ಎಂದರು.

ಉಕ್ರೇನ್‌ಗೆ ಹೆಚ್ಚುವರಿಯಾಗಿ ಸುಮಾರು ₹900 ಕೋಟಿ(113ಮಿಲಿಯನ್‌ಡಾಲರ್‌) ನೆರವು ನೀಡುವುದಾಗಿ ಡೆನ್ಮಾರ್ಕ್‌ ಹೇಳಿದೆ. ಇಲ್ಲಿಯವರೆಗೆ ಉಕ್ರೇನ್‌ನಿಗೆ ಸುಮಾರು ₹3,300 ಕೋಟಿ (413 ಮಿಲಿಯನ್‌ ಡಾಲರ್‌) ನೆರವನ್ನುಡೆನ್ಮಾರ್ಕ್‌ ನೀಡಿದೆ.

ಯುದ್ಧದಿಂದಾಗಿ ಉಕ್ರೇನ್‌ಗೆ ಸುಮಾರು ₹9 ಲಕ್ಷ ಕೋಟಿಗೂ ಅಧಿಕ ನಷ್ಟವಾಗಿದೆ ಎಂದು ಕೀವ್‌ನ ಸೂಲ್ಕ್‌ ಆಫ್‌ ಎಕನಾಮಿಕ್ಸ್‌ ಬುಧವಾರ ವರದಿ ನೀಡಿದೆ. 304 ಸೇತುವೆಗಳು, 900 ಆರೋಗ್ಯ ಕೇಂದ್ರಗಳು ನಾಶವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT