ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಿಯುಪೊಲ್‌ ನಗರ ವಿಮೋಚನೆ: ರಷ್ಯಾ ಪಡೆಗಳಿಗೆ ಸಿಕ್ಕ ಯಶಸ್ಸು– ಪುಟಿನ್‌ ಶ್ಲಾಘನೆ

Last Updated 21 ಏಪ್ರಿಲ್ 2022, 20:41 IST
ಅಕ್ಷರ ಗಾತ್ರ

ಮಾಸ್ಕೊ :ಉಕ್ರೇನಿನ ಬಂದರು ನಗರ ಮರಿಯುಪೊಲ್‌ನ ದೈತ್ಯ ಅಜೋವ್‌ಸ್ಟಾಲ್‌ ಉಕ್ಕಿನ ಸ್ಥಾವರದ ಮೇಲೆ ದಾಳಿ ಮಾಡುವ ಬದಲು, ಅದನ್ನು ವಶಕ್ಕೆ ಪಡೆಯಿರಿ ಎಂದು ತಮ್ಮ ಸೇನಾ ಪಡೆಗಳಿಗೆರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ಆದೇಶ ನೀಡಿದ್ದಾರೆ.

‘ಉಕ್ಕಿನ ಸ್ಥಾವರದ ಭೂಗತ ಸುರಂಗಗಳಲ್ಲಿ ರಕ್ಷಣೆ ಪಡೆದಿರುವವರಷ್ಟೇ ಅಲ್ಲ, ಒಂದು ನೊಣ ಕೂಡ ರಷ್ಯಾ ಸೇನೆಯ ಕಣ್ತಪ್ಪಿಸಿ ಸ್ಥಾವರದಿಂದ ಪರಾರಿಯಾಗಲು ಸಾಧ್ಯವಾಗಬಾರದು’ ಎಂದು ಪುಟಿನ್‌ ಆದೇಶ ಕೊಟ್ಟಿದ್ದಾರೆ.

ದೈತ್ಯ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರ ಹೊರತುಪಡಿಸಿ ಉಕ್ರೇನಿನ ಬಂದರು ನಗರ ರಷ್ಯಾದ ನಿಯಂತ್ರಣಕ್ಕೆ ಸಿಕ್ಕಿರುವುದಾಗಿ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಮಾಹಿತಿ ಕೊಟ್ಟ ಬೆನ್ನಲ್ಲೇ ಪುಟಿನ್ ಅವರು,ಮರಿಯುಪೊಲ್‌ನ ವಿಮೋಚನೆ ರಷ್ಯಾ ಪಡೆಗಳಿಗೆ ಸಿಕ್ಕಿದ ಯಶಸ್ಸು ಎಂದು ಶ್ಲಾಘಿಸಿದರು.

‘ಅಜೋವ್‌ಸ್ಟಾಲ್‌ ಸ್ಥಾವರದಲ್ಲಿ ಸುಮಾರು ಎರಡು ಸಾವಿರ ಉಕ್ರೇನ್‌ ಸೈನಿಕರು ಇರುವ ಅಂದಾಜಿದೆ. ಸ್ಥಾವರದೊಳಗಿನಭೂಗತ ಸುರಂಗಗಳ ಸಂಪರ್ಕ ಜಾಲ ಬಳಸಿಕೊಂಡು ಉಕ್ರೇನ್‌ ಸೇನೆ ಅಂತಿಮ ಪ್ರತಿರೋಧ ತೋರುತ್ತಿದೆ’ ಎಂದು ಶೋಯಿಗು, ಪುಟಿನ್‌ ಅವರಿಗೆ ಮಾಹಿತಿ ನೀಡಿದರು.

‘ಅಜೋವ್‌ಸ್ಟಾಲ್‌ ಸ್ಥಾವರದ ಮೇಲೆ ಭೀಕರ ದಾಳಿ ಕಾರ್ಯಸಾಧುವಲ್ಲ. ತಕ್ಷಣ ಆ ಯೋಜನೆ ನಿಲ್ಲಿಸಿ’ ಎಂದು ರಕ್ಷಣಾ ಸಚಿವ ಶೋಯಿಗು ಅವರಿಗೆ ಪುಟಿನ್‌ ಆದೇಶ ನೀಡಿದರು.

‘ಇಂತಹ ಭೂಗತ ಸಮಾಧಿಗಳನ್ನು ತಲುಪುವ ಮತ್ತು ಸ್ಥಾವರದ ಭೂಗತ ಸುರಂಗಗಳಲ್ಲಿ ತೆವಳುವ ಅಗತ್ಯವಿಲ್ಲ.ಒಂದು ನೊಣ ಕೂಡ ತಪ್ಪಿಸಿಕೊಳ್ಳದಂತೆ ಸ್ಥಾವರದ ಎಲ್ಲ ಮಾರ್ಗಗಳನ್ನು ನಿರ್ಬಂಧಿಸಿ’ ಎಂದು ಪುಟಿನ್ ತಮ್ಮ ಸೇನೆಗೆ ಸೂಚಿಸಿದರು.

ರಷ್ಯಾ ಪಡೆಗಳು ಮುತ್ತಿಗೆ ಹಾಕಿರುವ ಈ ನಗರದಲ್ಲಿ ಆಹಾರ, ನೀರು, ವಿದ್ಯುತ್ ಇಲ್ಲದೇ ಸಾವಿರಾರು ನಾಗರಿಕರು ಮೃತಪಟ್ಟಿರುವ ಅಂದಾಜು ಇದೆ.

ಉಕ್ರೇನ್‌ನ ಹಾರ್ಕಿವ್‌ ನಗರದ ಮೇಲೆ ಗುರುವಾರ ನಸುಕಿನನಲ್ಲಿ ರಷ್ಯಾ ಪಡೆಗಳು ಭೀಕರ ಬಾಂಬ್‌ ದಾಳಿ ನಡೆಸಿವೆ ಎಂದು ಮೇಯರ್ ಇಹೋರ್ ತೆರೆಖೋವ್ತಿಳಿಸಿದ್ದಾರೆ.

ಸೇನಾ ನೆರವು: ರಷ್ಯಾದ ವಿರುದ್ಧ ಹೋರಾಡಲು ಉಕ್ರೇನ್‌ಗೆ ಹೆಚ್ಚುವರಿ
ಯಾಗಿ 800 ದಶಲಕ್ಷ ಡಾಲರ್‌ ಮೊತ್ತದ ಸೇನಾ ನೆರವನ್ನು ಅಮೆರಿಕ ಅಧ್ಯಕ್ಷಜೋ ಬೈಡನ್‌ ಪ್ರಕಟಿಸಲಿದ್ದಾರೆ ಎಂದು ಶ್ವೇತ ಭವನದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

---

9 ಶವ ಪತ್ತೆ

ಕೀವ್‌ (ಎಎಫ್‌ಪಿ): ರಾಜಧಾನಿ ಹೊರ ವಲಯದ ಬೊರೊಡಿಯಾಂಕ ಪಟ್ಟಣದಲ್ಲಿ ಒಂಬತ್ತು ನಾಗರಿಕರ ಶವಗಳು ಗುರುವಾರ ಪತ್ತೆಯಾಗಿದ್ದು, ಚಿತ್ರಹಿಂಸೆ ನೀಡಿ ಕೊಂದಿರುವ ಗುರುತುಗಳು ಶವಗಳ ಮೇಲಿವೆ ಎಂದು ಕೀವ್‌ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಆಂಡ್ರಿ ನಿಬಿಟೋವ್‌ ತಿಳಿಸಿದರು.

ಬೊರೊಡಿಯಾಂಕ ಸುತ್ತಲೂ ಪೊಲೀಸರು 2 ಸಮಾಧಿಗಳನ್ನು ಪತ್ತೆಹಚ್ಚಿದ್ದಾರೆ. ಒಂದು ಸಮಾಧಿಯಲ್ಲಿ 15 ವರ್ಷದ ಬಾಲಕಿ ಸೇರಿ ಮೂವರ ಶವ ಸಿಕ್ಕಿದರೆ, ಎರಡನೇ ಸಮಾಧಿಯಲ್ಲಿ ಆರು ಶವಗಳು ಸಿಕ್ಕಿವೆ. ಮೃತರೆಲ್ಲರೂ ಸ್ಥಳೀಯರು ಎಂದುನಿಬಿಟೋವ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT