ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಮಗುವಿಗೆ ಜನ್ಮ ನೀಡಿದ ಬ್ರಿಟನ್‌ ರಾಜಕುಮಾರಿ ಯೂಜೆನಿ

Last Updated 10 ಫೆಬ್ರುವರಿ 2021, 3:34 IST
ಅಕ್ಷರ ಗಾತ್ರ

ಲಂಡನ್: ಬ್ರಿಟನ್ ರಾಜಕುಮಾರಿ ಯೂಜೆನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಬಂಕಿಂಗ್‌ಹ್ಯಾಂ ಅರಮನೆ ಪ್ರಕಟಣೆ ತಿಳಿಸಿದೆ.

ಎರಡನೇ ರಾಣಿ ಎಲಿಜಬೆತ್ ಅವರ ಮೊಮ್ಮಗಳಾಗಿರುವ ಯೂಜೆನಿ ಹಾಗೂ ಆಕೆಯ ಪತಿ ಜ್ಯಾಕ್ ಬ್ರೂಕ್ಸ್‌ಬ್ಯಾಂಕ್‌ ಅವರು ಲಂಡನ್‌ನ ಪೋರ್ಟ್‌ಲ್ಯಾಂಡ್ ಆಸ್ಪತ್ರೆಯಲ್ಲಿ ಮಗುವನ್ನು ಸ್ವಾಗತಿಸಿದರು.

ನವಜಾತ ಶಿಶುವು 8 ಪೌಂಡ್‌, 1 ಔನ್ಸ್‌ನಷ್ಟಿದ್ದು, ಬ್ರೂಕ್ಸ್‌ಬ್ಯಾಂಕ್‌ ಹಾಗೂ ಯೂಜೆನಿ ದಂಪತಿಯ ಮೊದಲ ಮಗುವಾಗಿದೆ. ರಾಣಿಯ ಒಂಬತ್ತನೇ ಮೊಮ್ಮಗುವಾಗಿದೆ.

ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ಅರಮನೆ ಪ್ರಕಟಣೆ ತಿಳಿಸಿದೆ.

ಯೂಜೆನಿ ಅವರು 2018ರ ಅಕ್ಟೋಬರ್‌ನಲ್ಲಿ ಬ್ರೂಕ್ಸ್‌ಬ್ಯಾಂಕ್‌ ಅವರನ್ನು ವಿವಾಹವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT