ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾಕ್‌, ಸಿರಿಯಾದಲ್ಲಿ 10 ಸಾವಿರಕ್ಕೂ ಹೆಚ್ಚು ಐಎಸ್‌ ಉಗ್ರರು ಸಕ್ರಿಯ

Last Updated 25 ಆಗಸ್ಟ್ 2020, 6:04 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ‘ಇರಾನ್‌ ಮತ್ತು ಸಿರಿಯಾದಲ್ಲಿ 10 ಸಾವಿರಕ್ಕೂ ಹೆಚ್ಚು ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಸಕ್ರಿಯರಾಗಿದ್ದಾರೆ. ಅಲ್ಲದೆ ಈ ವರ್ಷ ಅವರ ದಾಳಿಗಳು ಗಮರ್ನಾಹವಾಗಿ ಹೆಚ್ಚಿದೆ’ ಎಂದು ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಇಲಾಖೆ ಮುಖ್ಯಸ್ಥ ವ್ಲಾದಿಮಿರ್ ವೊರೊನ್‌ಕೊವ್‌ ತಿಳಿಸಿದ್ದಾರೆ.

‘ಐಎಸ್ ಉಗ್ರರು ಒಂದು ರಾಷ್ಟ್ರದಿಂದ ಇನ್ನೊಂದು ದೇಶಕ್ಕೆ ಸಣ್ಣ ಗುಂಪುಗಳಲ್ಲಿ ಸುಲಭವಾಗಿ‍ಪ್ರಯಾಣಿಸುತ್ತಿದ್ದಾರೆ. ಈ ಸಂಘಟನೆಯ ದಾಳಿ ಸಂಘರ್ಷದ ಸ್ಥಳಗಳಾದ ಸಿರಿಯಾ, ಇರಾಕ್‌ ಮಾತ್ರಕ್ಕೆ ಸೀಮಿತವಾಗಿಲ್ಲ. ಇತರ ಪ್ರದೇಶಗಳಲ್ಲೂ ಐಎಸ್‌ ದಾಳಿ ನಡೆಸುತ್ತಿದೆ’ ಎಂದು ಅವರು ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ವಿವರಿಸಿದ್ದಾರೆ.

‘ಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಹಲವು ದೇಶಗಳಲ್ಲಿ ಹೇರಲಾಗಿರುವ ಲಾಕ್‌ಡೌನ್‌ನಿಂದಾಗಿ ದಾಳಿಗಳ ಪ್ರಮಾಣ ಕಡಿಮೆಯಾಗಿದೆ. ಜತೆಗೆ, ಉಗ್ರರ ಸಂಚಾರಕ್ಕೂ ಕಡಿವಾಣ ಬಿದ್ದಿದೆ. ಆದರೆ, ಉಗ್ರರ ಸಣ್ಣ ಗುಂಪುಗಳು ದಾಳಿಗಳನ್ನು ಮುಂದುವರಿಸಿವೆ’ ಎಂದು ವ್ಲಾದಿಮಿರ್ ತಿಳಿಸಿದ್ದಾರೆ.

‘ಪ್ರಸ್ತುತ ಸಂದರ್ಭ ಭಯೋತ್ಪಾದನೆ ಶಮನಕ್ಕೆ ಉತ್ತಮವಾಗಿದೆ. ಈ ಸಮಯವನ್ನು ಸದುಪಯೋಗಪಡಿಸಿಕೊಂಡು ಐಎಸ್‌ನಂತಹ ಉಗ್ರ ಸಂಘಟನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT