ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರ ಒಕ್ಕೂಟಕ್ಕೆ ವೀಕ್ಷಕ ಸ್ಥಾನ ನೀಡುವ ಭಾರತದ ಪ್ರಸ್ತಾವಕ್ಕೆ ಅನುಮೋದನೆ

Last Updated 29 ಅಕ್ಟೋಬರ್ 2021, 6:34 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಗ್ಲಾಸ್ಗೊದಲ್ಲಿ ನಡೆಯುತ್ತಿರುವ 76ನೇ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಹವಾಮಾನ ಬದಲಾವಣೆ ಸಮಿತಿಯ ಸಭೆಯಲ್ಲಿ ಅಂತರರಾಷ್ಟ್ರೀಯ ಸೌರಶಕ್ತಿ ಒಕ್ಕೂಟಕ್ಕೆ ವೀಕ್ಷಕ ಸ್ಥಾನಮಾನ ನೀಡುವ ಕುರಿತು ಭಾರತ ಮಂಡಿಸಿದ್ದ ಕರಡು ನಿರ್ಣಯವನ್ನು ವಿಶ್ವಸಂಸ್ಥೆಯ ಮಹಾ ಅಧಿವೇಶನ ಸಮಿತಿ ಅನುಮೋದಿಸಿದೆ.

ಹವಾಮಾನ ಬದಲಾವಣೆ ವಿಷಯದಲ್ಲಿ ಎದುರಾಗಬಹುದಾದ ಕಾನೂನಾತ್ಮಕ ಸಮಸ್ಯೆಗಳನ್ನು ಪರಿಹರಿಸುವ ಈ ಕರಡು ನಿರ್ಣಯವನ್ನು ಗುರುವಾರ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಆರನೇ ಸಮಿತಿಯ ಔಪಚಾರಿಕವಾಗಿ ಅನುಮೋದಿಸಿದೆ.

ವಿಶ್ವಸಂಸ್ಥೆಯಲ್ಲಿನ ಭಾರತದ ಉಪ ಕಾಯಂ ಪ್ರತಿನಿಧಿ ಆರ್. ರವೀಂದ್ರ, ‘ಮುಂದಿನ ವಾರ ಗ್ಲಾಸ್ಗೊದಲ್ಲಿ ನಡೆಯಲಿರುವ ‘ಸಿಒಪಿ–26‘ ಸಭೆಗೆ ಪೂರ್ವಭಾವಿಯಾಗಿ, ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ವೀಕ್ಷಕರ ಸ್ಥಾನಮಾನ ನೀಡುವ ಕರಡು ನಿರ್ಣಯದ ಮೇಲೆ ಇಂದು ಕೈಗೊಂಡ ಕ್ರಮವು ಸಾಂಕೇತಿಕವಾಗಿರುವ ಜೊತೆಗೆ, ವಸ್ತುನಿಷ್ಠವಾಗಿದೆ‘ ಎಂದು ಟ್ವೀಟ್‌ ಮಾಡಿದ್ದಾರೆ.

‘ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕೈಗೊಳ್ಳುವ ಕ್ರಮಗಳ ಬಗ್ಗೆಯೂ ಭಾರತ ಚರ್ಚಿಸಲಿದೆ‘ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT