ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ: ಹೋಮ್‌ ಲ್ಯಾಂಡ್ ಸೆಕ್ಯುರಿಟಿ ಪ್ರಭಾರಿ ಮುಖ್ಯಸ್ಥ ವುಲ್ಪ್ ರಾಜೀನಾಮೆ

ಕ್ಯಾಪಿಟಲ್ ಹಿಲ್ಸ್‌ ಮೇಲಿನ ಟ್ರಂಪ್ ಬೆಂಬಲಿಗರ ದಾಳಿ ಬಳಿಕ ನಿರ್ಧಾರ
Last Updated 12 ಜನವರಿ 2021, 7:19 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಕ್ಯಾಪಿಟಲ್‌ ಹಿಲ್ಸ್‌ ಮೇಲೆ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯ ನಂತರ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ವಿಭಾಗದ ಪ್ರಭಾರಿ ಕಾರ್ಯದರ್ಶಿ ಚಾಡ್‌ ವುಲ್ಫ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಜನವರಿ 20ರಂದು ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಮುನ್ನ ರಾಷ್ಟ್ರವ್ಯಾಪಿ ‘ಸಶಸ್ತ್ರ ಪ್ರತಿಭಟನೆ‘ ಆಯೋಜಿಸಲಾಗುತ್ತಿದೆ ಎಂಬ ಬ್ಯೂರೊ ಆಫ್ ಫೆಡರಲ್ ಇನ್ವಿಸ್ಟಿಗೇಷನ್‌(ಎಫ್‌ಬಿಐ) ಎಚ್ಚರಿಸಿರುವ ನಡುವೆ ವುಲ್ಫ್‌ ಅವರ ರಾಜೀನಾಮೆ ಸಲ್ಲಿಸಿದ್ದಾರೆ.

ಟ್ರಂಪ್ ಆಡಳಿತದ ಹಲವು ಫೆಡರಲ್ ಕಾನೂನು ಜಾರಿ ಸಂಸ್ಥೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ವುಲ್ಫ್ ಅವರು ಬೈಡನ್ ಅವರ ಅಧಿಕಾರ ಸ್ವೀಕಾರ ಸಮಾರಂಭದ ಭದ್ರತೆಯ ಉಸ್ತುವಾರಿಯಾಗಿದ್ದರು.

‘ಟ್ರಂಪ್ ಆಡಳಿತದ ಕೊನೆಯವರೆಗೂ ಇಲಾಖೆಗೆ ಸೇವೆ ಸಲ್ಲಿಸುವುದು ನನ್ನ ಉದ್ದೇಶವಾಗಿತ್ತು. ಹಾಗಾಗಿ, ಈಗ ಇಂಥ ನಿರ್ಧಾರ ತೆಗೆದುಕೊಂಡಿದ್ದೇನೆ’ ಎಂದು ಸೋಮವಾರ ಹೋಮ್ಲ್ಯಾಂಡ್ ಸೆಕ್ಯುರಿಟಿ ಇಲಾಖೆಯ ಸಿಬ್ಬಂದಿಗೆ ಕಳುಹಿಸಿರುವ ಇಮೇಲ್‌ನಲ್ಲಿ ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT