ಭಾನುವಾರ, ಜೂನ್ 13, 2021
26 °C

ಕೋವಿಡ್ ಬಿ1617 ರೂಪಾಂತರಿ ವಿರುದ್ಧ ಅಮೆರಿಕದ ಲಸಿಕೆ ಪರಿಣಾಮಕಾರಿ: ಅಧಿಕಾರಿಗಳು

ಪಿಟಿಐ‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್: ಅಮೆರಿಕದಿಂದ ಅಂಗೀಕೃತಗೊಂಡಿರುವ ಫೈಜರ್, ಮಾಡರ್ನಾ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್‌ ಕೋವಿಡ್-19 ಲಸಿಕೆಗಳು ಭಾರತದಲ್ಲಿ ಕಂಡುಬಂದಿರುವ ಬಿ1617 ರೂಪಾಂತರಿ ವೈರಸ್ ವಿರುದ್ಧ ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ಉನ್ನತ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದಲ್ಲಿ ಕಂಡುಬಂದಿರುವ ರೂಪಾಂತರಿ ವೈರಸ್‌ ಹಾಗೂ ಅಮೆರಿಕದ ಮೂರು ಪ್ರಮುಖ ಲಸಿಕೆಗಳ ಇತ್ತೀಚಿನ ಅಂಕಿಅಂಶಗಳನ್ನು ಆಧರಿಸಿ ಇದನ್ನು ಹೇಳಲಾಗಿದೆ ಎಂದು ರಾಷ್ಟ್ರೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ. ಫ್ರಾನ್ಸಿಸ್ ಕಾಲಿನ್ಸ್ ತಿಳಿಸಿದ್ದಾರೆ.

ಇದನ್ನೂ ಓದಿ: 

ಅಂಕಿಅಂಶಗಳ ಪ್ರಕಾರ ಅಮೆರಿಕ ಅಂಗೀಕೃತ ಫೈಜರ್, ಮಾಡರ್ನಾ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ ಲಸಿಕೆಗಳು ಭಾರತದಲ್ಲಿರುವ ಬಿ1617 ರೂಪಾಂತರಿ ಕೋವಿಡ್ ವೈರಸ್ ವಿರುದ್ಧ ಪರಿಣಾಮಕಾರಿಯೆನಿಸಿದೆ. ಅಮೆರಿಕನ್ನರನ್ನು ರಕ್ಷಿಸಲು ಇದರಿಂದ ಸಹಾಯವಾಗಲಿದೆ ಎಂದು ಹೇಳಿದ್ದಾರೆ.

ಇದಕ್ಕೂ ಮೊದಲು ಭಾರತದಲ್ಲಿ ಮೊತ್ತ ಮೊದಲು ಕಂಡುಬಂದಿರುವ ಬಿ1617 ಸಾರ್ಸ್ ಕೋವ್-2 ವೈರಾಣು ಅತ್ಯಂತ ಕಳವಳಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ್ದು, ಹೆಚ್ಚು ವೇಗವಾಗಿ ಹರಡಬಲ್ಲದು ಎಂದು ಎಚ್ಚರಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು