ಬುಧವಾರ, ಅಕ್ಟೋಬರ್ 5, 2022
27 °C
220 ಅಡಿ ಎತ್ತರದಲ್ಲಿ ಭಾರತ–ಅಮೆರಿಕ ರಾಷ್ಟ್ರಧ್ವಜ ಪ್ರದರ್ಶನ, 32 ದೇಶಗಳು ಭಾಗಿ

ಬೂಸ್ಟನ್‌ನಲ್ಲಿ ಭಾರತದ ಸ್ವಾತಂತ್ರ್ಯೋತ್ಸವ: ಭಾಗಿಯಾಗಲಿವೆ 32 ದೇಶಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ : ಅಮೆರಿಕದ ಬೂಸ್ಟನ್‌ ನಗರದಲ್ಲಿ ಭಾರತದ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದು ಎಂದು ಫೆಡರೇಶನ್‌ ಆಫ್‌ ಇಂಡಿಯನ್ ಅಸೋಸಿಯೇಷನ್‌ (ಎಫ್‌ಐಎ)– ನ್ಯೂ ಇಂಗ್ಲೆಂಡ್‌ ಅಧ್ಯಕ್ಷ ಅಭಿಷೇಕ್‌ ಸಿಂಗ್ ತಿಳಿಸಿದ್ದಾರೆ.

ಐತಿಹಾಸಿಕ ಕಾರ್ಯಕ್ರಮದಲ್ಲಿ 32 ದೇಶಗಳು ಭಾಗಿಯಾಗಲಿದ್ದು, ವಿಮಾನದ ಮೂಲಕ 220 ಅಡಿ ಎತ್ತರದಲ್ಲಿ ಭಾರತ–ಅಮೆರಿಕದ ರಾಷ್ಟ್ರಧ್ವಜವನ್ನು ಪ್ರದರ್ಶಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಇದೇ ಮೊದಲ ಬಾರಿಗೆ ಬೂಸ್ಟನ್‌ನ ಇಂಡಿಯಾ ಸ್ಟ್ರೀಟ್‌ನಾದ್ಯಂತ ಸ್ವಾತಂತ್ರ್ಯ ವೀರರು ಮತ್ತು ಅವರ ತ್ಯಾಗದ ಕತೆ ಹೇಳುವ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಪರೇಡ್‌ಗೆ ಮಾಜಿ ಭಾರತೀಯ ಕ್ರಿಕೆಟ್‌ ಆಟಗಾರ ಆರ್‌.ಪಿ.ಸಿಂಗ್‌ ಅವರನ್ನು ಆಹ್ವಾನಿಸಲಾಗಿದೆ. ಮೊದಲೇ ರೆಕಾರ್ಡ್‌ ಮಾಡಲಾದ ಕೇಂದ್ರ ಸಚಿವ ಪಿಯೂಷ್‌ ಗೋಯಲ್‌ ಅವರ ವಿಡಿಯೊ ಸಂದೇಶವನ್ನು ಕಾರ್ಯಕ್ರಮದಂದು ಪ್ರಸಾರ ಮಾಡಲಾಗುತ್ತದೆ ಎಂದು ಎಫ್‌ಐಎ ಪ್ರಕಟಣೆಯಲ್ಲಿ ತಿಳಿಸಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು