ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಯ ದೇಶಗಳಿಗೂ ಕೋವಿಡ್ ಲಸಿಕೆ: ಭಾರತದ ಯೋಜನೆಯನ್ನು ಶ್ಲಾಘಿಸಿದ ಅಮೆರಿಕ

Last Updated 15 ಜನವರಿ 2021, 6:03 IST
ಅಕ್ಷರ ಗಾತ್ರ

ವಾಷಿಂಗ್ಟನ್: ತಮ್ಮ ನೆರೆಯ ದೇಶಗಳಿಗೆ ಮತ್ತು ವಿಶ್ವದಾದ್ಯಂತ ಪಾಲುದಾರ ದೇಶಗಳಿಗೆ ಲಸಿಕೆಗಳನ್ನು ಪೂರೈಸಲುಮುಂದಾಗಿರುವ ಭಾರತದ ಯೋಜನೆಯನ್ನು ಅಮೆರಿಕದ ಅಗ್ರ ಕಾಂಗ್ರೆಸ್ ಮುಖಂಡರು ಶ್ಲಾಘಿಸಿದ್ದಾರೆ.

""ನಮ್ಮ ಮಿತ್ರ ದೇಶ ಭಾರತವು ಭಾರತದಲ್ಲಿ ತಯಾರಾದ ಲಕ್ಷಾಂತರ ಕೋವಿಡ್ ಲಸಿಕೆಗಳನ್ನು ಖರೀದಿಸಿ ತನ್ನ ನೆರೆಹೊರೆಯವರಿಗೆ ಮತ್ತು ವಿಶ್ವದಾದ್ಯಂತ ಪಾಲುದಾರ ರಾಷ್ಟ್ರಗಳಿಗೆ ಪೂರೈಸುತ್ತಿರುವುದನ್ನು ನೋಡಲು ಅದ್ಭುತ ಎನಿಸುತ್ತಿದೆ" ಎಂದು ಕಾಂಗ್ರೆಸ್ ಸದಸ್ಯ ಬ್ರಾಡ್ ಶೆರ್ಮನ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

"ಭಾರತವು ವಿಶ್ವದ ಅತಿದೊಡ್ಡ ಲಸಿಕೆ ತಯಾರಿಕಾ ದೇಶಗಳಲ್ಲಿ ಒಂದಾಗಿದೆ. ಈ ಸಾಂಕ್ರಾಮಿಕ ರೋಗವನ್ನು ತೊಡೆದುಹಾಕಲು ಇಡೀ ಅಂತರರಾಷ್ಟ್ರೀಯ ಸಮುದಾಯಕ್ಕೆ ಅತ್ಯಂತ ಅಗತ್ಯವಿರುವ ಸಮಯದಲ್ಲಿ ಭಾರತವು ಜಗತ್ತಿಗೆ ಸಹಾಯ ಮಾಡಲು ಮುಂದಾಗಿದೆ" ಎಂದು ಶೆರ್ಮನ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಎರಡು ಲಸಿಕೆಗಳಿಗೆ ಅನುಮೋದನೆ ನೀಡಿದ ಭಾರತ ಸರ್ಕಾರವು ಲಕ್ಷಾಂತರ ಕೋವಿಡ್ 19 ಲಸಿಕೆಗಳನ್ನು ಖರೀದಿಸಿ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ, ಸೀಶೆಲ್ಸ್ ಮತ್ತು ಮಾರಿಷಸ್‌ ದೇಶಗಳಿಗೆ ಸರಬರಾಜು ಮಾಡಲು ಯೋಜಿಸಿದೆ.

ಜನವರಿ 16ರಿಂದ ಭಾರತದಲ್ಲಿ ಬೃಹತ್ ಲಸಿಕೆ ಅಭಿಯಾನ ಆರಂಭವಾಗುತ್ತಿದ್ದು, ಮೊದಲಿಗೆ ಆದ್ಯತೆ ಮೇರೆಗೆ ಆರೋಗ್ಯ ಸೇವೆ ಮತ್ತು ಕೋವಿಡ್ ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರಮೋದಿ ಚಾಲನೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT