ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ಅಭ್ಯಾಸಕ್ಕೆ ಮೂಗುತೂರಿಸದಿರಿ: ಚೀನಾಕ್ಕೆ ಅಮೆರಿಕ ಖಡಕ್‌ ಎಚ್ಚರಿಕೆ

Last Updated 2 ಡಿಸೆಂಬರ್ 2022, 18:40 IST
ಅಕ್ಷರ ಗಾತ್ರ

ನವದೆಹಲಿ:ಉತ್ತರಾಖಂಡದ ಸಮೀಪ ದೇಶದ ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ಭಾರತ– ಅಮೆರಿಕ ಸೇನಾ ಪಡೆಗಳು ನಡೆಸುತ್ತಿರುವ ‘ಯುದ್ಧ್ ಅಭ್ಯಾಸ್‌’ ಜಂಟಿ ಸಮರಾಭ್ಯಾಸಕ್ಕೆ ಚೀನಾ ವ್ಯಕ್ತಪಡಿಸಿರುವ ವಿರೋಧವನ್ನು ಅಮೆರಿಕ ಶುಕ್ರವಾರ ತಿರಸ್ಕರಿಸಿದ್ದು, ‘ಇದರಲ್ಲಿ ನೀವು ಮೂಗು ತೂರಿಸಬೇಡಿ’ ಎಂದು ಚೀನಾಕ್ಕೆ ತಿರುಗೇಟು ನೀಡಿದೆ.

ಭಾರತಕ್ಕೆ ಅಮೆರಿಕದ ರಕ್ಷಣಾ ವ್ಯವಹಾರಗಳ ಉಸ್ತುವಾರಿಯಾಗಿ ಹೊಸದಾಗಿ ನೇಮಕವಾಗಿರುವ ರಾಯಭಾರಿ ಎಲಿಜಬೆತ್ ಜೋನ್ಸ್ ಅವರು, ಪ್ರಾದೇಶಿಕ ಭದ್ರತಾ ಸವಾಲುಗಳನ್ನು ಎದುರಿಸಲು ಹೆಚ್ಚು ಸಮರ್ಥವಾಗಲು ಭಾರತದ ಪ್ರಯತ್ನಗಳನ್ನು ಅಮೆರಿಕ ಬೆಂಬಲಿಸುತ್ತದೆ. ಭಾರತದ ಜತೆಗಿನ ಸಹಭಾಗಿತ್ವವನ್ನು ತನ್ನ ಅತ್ಯಂತ ಪರಿಣಾಮಕಾರಿ ಸಂಬಂಧಗಳಲ್ಲಿ ಒಂದೆಂದು ಅಮೆರಿಕ ನೋಡುತ್ತದೆ ಎಂದರು.

ಕಳೆದ ತಿಂಗಳು ಬಾಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ಕೊನೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ನಡುವಿನ ಸಭೆಯಲ್ಲಿಹೊಂದಾಣಿಕೆ ಮೂಡುವ ಸೂಚನೆಗಳು ಕಾಣಿಸಲಿಲ್ಲ. ಇಂಡೋ-ಪೆಸಿಫಿಕ್‌ ವಲಯದ ಮುಕ್ತತೆಗೆ ಅಮೆರಿಕ ಬದ್ಧವಾಗಿದೆ ಎಂದು ಜೋನ್ಸ್ ಹೇಳಿದರು.

‘ಯುದ್ಧ್ ಅಭ್ಯಾಸ್‌’ ವಿರೋಧಿಸಿದ್ದ ಚೀನಾ, ‘ಇದು ನವದೆಹಲಿ ಮತ್ತು ಬೀಜಿಂಗ್ ನಡುವೆ ಉಭಯ ರಾಷ್ಟ್ರಗಳ ಗಡಿ ಸಮಸ್ಯೆ ಸಂಬಂಧ ನಡೆದಿರುವ ಒಪ್ಪಂದಗಳ ಆಶಯ ಉಲ್ಲಂಘಿಸುತ್ತದೆ. ಉಭಯ ರಾಷ್ಟ್ರಗಳ ನಡುವೆ ಪರಸ್ಪರ ನಂಬಿಕೆಯನ್ನು ಗಟ್ಟಿಗೊಳಿಸುವುದಿಲ್ಲ’ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT