ಗಾಂಧಿ, ಮಾರ್ಟಿನ್ ಲೂಥರ್ಕಿಂಗ್ ಕೊಡುಗೆಗೆ ಪ್ರಚಾರ: ಶಾಸನ ಅಂಗೀಕರಿಸಿದ ಅಮೆರಿಕ

ವಾಷಿಂಗ್ಟನ್: ಮಹಾತ್ಮ ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ತತ್ವಾದರ್ಶ, ಮಾನವ ಕುಲಕ್ಕೆ ಅವರ ಕೊಡುಗೆಗಳ ಕುರಿತ ಅಧ್ಯಯನ, ಪ್ರಚಾರಕ್ಕೆ ಅನುವು ನೀಡುವ ಶಾಸನವನ್ನು ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ (ಸಂಸತ್ನ ಕೆಳಮನೆ) ಅಂಗೀಕರಿಸಿದೆ.
ಈ ಉದ್ದೇಶ ಈಡೇರಿಕೆಗೆ ಭಾರತ ಮತ್ತು ಅಮೆರಿಕ ನಡುವೆ ವಿನಿಮಯ ಕಾರ್ಯಕ್ರಮ ಆರಂಭಿಸಿ, ಉಭಯ ನಾಯಕರ ಸಾಧನೆ, ಕೊಡುಗೆ ಕುರಿತು ಅಧ್ಯಯನ ಕೈಗೊಳ್ಳಲು ಈ ಶಾಸನ ಅವಕಾಶ ಕಲ್ಪಿಸಲಿದೆ.
‘ಹಮಾಮಾನ ಬದಲಾವಣೆ, ಶಿಕ್ಷಣ ಹಾಗೂ ಸಾರ್ವಜನಿಕ ಆರೋಗ್ಯದಂತಹ ಪ್ರಮುಖ ವಿಷಯಗಳ ಕುರಿತು ಸಂಶೋಧನೆ, ವಿನಿಮಯ ಕಾರ್ಯಕ್ರಮ ಹಮ್ಮಿಕೊಳ್ಳಲು ಪ್ರತಿಷ್ಠಾನವೊಂದನ್ನು ಸ್ಥಾಪಿಸಲು ಸಹ ಈ ಶಾಸನದಿಂದ ಸಾಧ್ಯವಾಗಲಿದೆ’ ಎಂದು ಸಂಸದ ಹಾಗೂ ಸಂಸತ್ನ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಎಲಿಯಟ್ ಎಂಗೆಲ್ ವಿಶ್ವಾಸ ವ್ಯಕ್ತಪಡಿಸಿದರು.
ನಾಗರಿಕ ಹಕ್ಕುಗಳ ಹೋರಾಟಗಾರ ಹಾಗೂ ಸಂಸದರಾಗಿದ್ದ ಜಾನ್ ಲೆವಿಸ್ ಅವರು ಭಾರತ ಮೂಲದ ಅಮೆರಿಕನ್ ಸಂಸದ ಅಮಿ ಬೆರಾ ಅವರ ಸಹಯೋಗದಲ್ಲಿ ‘ಗಾಂಧಿ–ಕಿಂಗ್ ಸ್ಕಾಲರ್ಲಿ ಎಕ್ಸ್ಚೇಂಜ್ ಇನಿಷಿಯೇಟಿವ್ ಆ್ಯಕ್ಟ್’ ಅನ್ನು ಸಿದ್ಧಪಡಿಸಿದ್ದರು. ಈ ಶಾಸನಕ್ಕೆ ಸಂಸತ್ನ ಕೆಳಮನೆ ಈಗ ಅಂಗೀಕಾರ ನೀಡಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.