ಸೋಮವಾರ, ನವೆಂಬರ್ 23, 2020
23 °C
ಅಮೆರಿಕದ ಜನಪ್ರತಿನಿಧಿಗಳ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರವಾದ ನಿರ್ಣಯ

ಚೀನಾದ ಮಾನವ ಹಕ್ಕು ಉಲ್ಲಂಘನೆ ನೀತಿ ಖಂಡಿಸಿ ಅಮೆರಿಕದಲ್ಲಿ ನಿರ್ಣಯ ಅಂಗೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಹಾಂಗ್‌ಕಾಂಗ್‌ನಲ್ಲಿ ಮಾನವ ಹಕ್ಕು ಮತ್ತು ಸ್ವಾತಂತ್ರ್ಯ ದುರ್ಬಲಗೊಳಿಸುವ ಚೀನಾದ ನೀತಿ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಖಂಡಿಸುವ ನಿರ್ಣಯವನ್ನು ಅಮೆರಿಕದ ಜನಪ್ರತಿನಿಧಿಗಳ ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ.

ಧ್ವನಿ ಮತಗಳ ಮೂಲಕ ಬುಧವಾರ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ಹಾಂಗ್‌ಕಾಂಗ್‌ ನಾಗರಿಕರ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯವನ್ನು ದಮನ ಮಾಡುವ ಚೀನಾದ ನೀತಿಯನ್ನು ಖಂಡಿಸಿ ನಿರ್ಣಯವನ್ನು ಮಂಡಿಸಲಾಗಿದೆ.

‘ಈ ನಿರ್ಣಯವನ್ನು ಅಂಗೀಕರಿಸುವ ಮೂಲಕ ಅಮೆರಿಕದ ಜನಪ್ರತಿನಿಧಿಗಳ ಸಭೆಯು ಚೀನಾಗೆ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಅಂತ್ಯಗೊಳಿಸುವಂತೆ ಸಂದೇಶ ರವಾನಿಸಿದೆ. ಟಿಬೆಟಿಯನ್ನರ ಧರ್ಮ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯ ಮತ್ತು ಹಾಂಗ್‌ಕಾಂಗ್‌ನಲ್ಲಿ ಕಾನೂನು ಸುವ್ಯವಸ್ಥೆಗಾಗಿ ಸದನವು ಹೋರಾಟ ನಡೆಸುತ್ತಿದೆ’ ಎಂದು ಜನಪ್ರತಿನಿಧಿಗಳ ಸಭೆಯ ಸಭಾಧ್ಯಕ್ಷೆ ನ್ಯಾನ್ಸಿ ಪೆಲೊಸಿ ಅವರು ತಿಳಿಸಿದರು.

ಮೈತ್ರಿ ರಾಷ್ಟ್ರಗಳೊಂದಿಗೆ ಸೇರಿ ಹಾಂಗ್‌ಕಾಂಗ್‌ನಲ್ಲಿ ಅಭಿವೃದ್ಧಿ ಕಾರ್ಯ ನಡೆಸುವಂತೆ ನಿರ್ಣಯದಲ್ಲಿ ಹೇಳಲಾಗಿದೆ.

‘ಈ ರೀತಿಯ ನಡೆಯು ಅಂತರರಾಷ್ಟ್ರೀಯ ಸಮುದಾಯದಲ್ಲಿ ಚೀನಾದ ಮೇಲಿನ ಭರವಸೆಯನ್ನು ಕಡಿಮೆಗೊಳಿಸುತ್ತಿದೆ. ಚೀನಾ ಮತ್ತು ಹಾಂಗ್‌ಕಾಂಗ್‌ ಸರ್ಕಾರಗಳು ಹಾಂಗ್‌ಕಾಂಗ್‌ ನಾಗರಿಕರ ಹಕ್ಕುಗಳಿಗೆ ಧಕ್ಕೆ ಉಂಟು ಮಾಡುವಂತಹ ಯಾವುದೇ ಕಾನೂನು ಮತ್ತು ಕ್ರಮಗಳನ್ನು ಕೈಗೊಳ್ಳದಂತೆ ನಿರ್ಣಯದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು