ವಾಷಿಂಗ್ಟನ್: ಮುಕ್ತ, ವೈವಿಧ್ಯಮಯ ಮತ್ತು ಸಮೃದ್ಧ ವಾತಾವರಣ ಸೃಷ್ಟಿಸುವ ಇಂಡೊ–ಪೆಸಿಫಿಕ್ ಪ್ರದೇಶಕ್ಕೆ ಶ್ರಮಿಸುವುದಾಗಿ ಅಮೆರಿಕ, ಜಪಾನ್ ಒಪ್ಪಿಕೊಂಡಿವೆ.

ಸಮೃದ್ಧ ಇಂಡೊ–ಫೆಸಿಫಿಕ್ ನಿರ್ಮಿಸಲು ‘ಕ್ವಾಡ್’ ಅನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾಗಿದೆ. ಇದಕ್ಕಾಗಿ ಭಾರತ ಮತ್ತು ಆಸ್ಟ್ರೇಲಿಯಾದೊಂದಿಗೆ ಕೆಲಸ ಮಾಡುವುದಾಗಿ ಉಭಯ ರಾಷ್ಟ್ರಗಳು ಹೇಳಿವೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮತ್ತು ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಅವರು ಶ್ವೇತ ಭವನದಲ್ಲಿ ಸಭೆ ನಡೆಸಿದರು. ಈ ವೇಳೆ ಇಂಡೊ–ಫೆಸಿಫಿಕ್ನ ಶಾಂತಿ ಮೇಲೆಚೀನಾದ ಕ್ರಮಗಳು ಬೀರುತ್ತಿರುವ ಪರಿಣಾಮದ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದರು.

‘ಕ್ವಾಡ್ ಮೂಲಕ ನಾವು ಪಾಲುದಾರರಾಗಿ ಕೆಲಸ ಮಾಡಲಿದ್ದೇವೆ. ನಾಲ್ಕು ರಾಷ್ಟ್ರಗಳು ಜತೆಗೂಡಿ ಕ್ವಾಡ್ ಅನ್ನು ಇನ್ನಷ್ಟು ಬಲಿಷ್ಠಗೊಳಿಸಲಿದ್ದೇವೆ’ ಎಂದು ಉಭಯ ನಾಯಕರು ಜಂಟಿಯಾಗಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದ ಒಕ್ಕೂಟವನ್ನು ’ಕ್ವಾಡ್’ ಎಂದು ಕರೆಯಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.