ವಾಷಿಂಗ್ಟನ್: ಅಮೆರಿಕಕ್ಕೆ ಈಗ ಹೊಸ ಪೀಳಿಗೆಯ ನಾಯಕತ್ವದ ಅಗತ್ಯವಿದೆ ಎಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣಾ ಪ್ರಚಾರ ಆರಂಭಿಸಿರುವ ರಿಪಬ್ಲಿಕನ್ ಪಕ್ಷದ ನಿಕ್ಕಿ ಹ್ಯಾಲೆ ಪ್ರತಿಪಾದಿಸಿದ್ದಾರೆ.
‘ನಮ್ಮಲ್ಲಿ ಹಲವು ರಾಜಕಾರಣಿಗಳಿದ್ದಾರೆ. ಆದರೆ, ಆಡಳಿತಾವಧಿ ಮಿತಿ ನಿಗದಿಪಡಿಸಿಕೊಳ್ಳುವುದು ಅಗತ್ಯವಿದೆ. 75 ವರ್ಷ ಮೀರಿದ ಚುನಾಯಿತ ಸದಸ್ಯರ ಆಡಳಿತ ಸಾಮರ್ಥ್ಯ ಪರೀಕ್ಷೆಯೂ ಆಗಬೇಕಾಗಿದೆ’ ಎಂದು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.
ಆದರೆ, ಶ್ವೇತಭವನ ಈ ಮಾತಿಗೆ ಸಹಮತ ವ್ಯಕ್ತಪಡಿಸಿಲ್ಲ. ನಾವು ಇಂತಹ ಮಾದರಿಯ ವಾಗ್ದಾಳಿಯನ್ನು ಹಿಂದೆಯೂ ಕೇಳಿದ್ದೇವೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕರೈನ್ ಜೀನ್ ಪಿಯರ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಹೇಳಿರುವ ಡೊನಾಲ್ಡ್ ಟ್ರಂಪ್ ಮತ್ತು ಹಾಲಿ ಅಧ್ಯಕ್ಷ ಜೋ ಬೈಡನ್ ಇಬ್ಬರೂ 75 ವರ್ಷ ಮೀರಿದವರಾಗಿದ್ದಾರೆ.
ಅಮೆರಿಕಕ್ಕೆ ಹೊಸ ಪೀಳಿಗೆಯ ನಾಯಕತ್ವ ಈಗಿನ ಅಗತ್ಯವಾಗಿದೆ. ಯಥಾಸ್ಥಿತಿಯನ್ನು ಮೀರಿ ನಡೆಯಬೇಕಾಗಿದೆ. ನಾವು ಭವಿಷ್ಯದ ಚಿಂತನೆ ನಡೆಸಲು ಆರಂಭಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.