ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತಕ್ಕೆ ವೈದ್ಯಕೀಯ ವೆಚ್ಚ: ಕಾರ್ಯಾದೇಶಕ್ಕೆ ಬೈಡನ್‌ ಸಹಿ

Last Updated 4 ಆಗಸ್ಟ್ 2022, 13:17 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಗರ್ಭಪಾತಕ್ಕೆ ಅವಕಾಶ ಇಲ್ಲದ ರಾಜ್ಯದಿಂದ ಗರ್ಭಪಾತಕ್ಕೆ ಅವಕಾಶ ಇರುವ ರಾಜ್ಯಗಳಿಗೆ ಹೋಗುವ ಮಹಿಳೆಯರಿಗೆ ವೈದ್ಯಕೀಯ ವೆಚ್ಚ ಭರಿಸುವುದಕ್ಕೆ ಸಂಬಂಧಿಸಿದ ಕಾರ್ಯಾದೇಶಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಸಹಿ ಹಾಕಿದ್ದಾರೆ.

ಅತ್ಯಾಚಾರದಿಂದ ಗರ್ಭಧರಿಸಿದ್ದರೆ ಅಥವಾ ಗರ್ಭಿಣಿಯ ಜೀವವು ಅಪಾಯದಲ್ಲಿದ್ದೆ ಮಾತ್ರ ಗರ್ಭಪಾತಕ್ಕೆ ಸರ್ಕಾರವು ವೈದ್ಯಕೀಯ ವೆಚ್ಚ ಭರಿಸಬಹುದು. ಇಲ್ಲವಾದಲ್ಲಿ ಅದು ಕಾನೂನು ಬಾಹಿರವಾಗಲಿದೆ.

ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯರಿಗೆ ವೈದ್ಯಕೀಯ ವೆಚ್ಚ ಭರಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲು ಗರ್ಭಪಾತಕ್ಕೆ ಅವಕಾಶ ಇರುವ ರಾಜ್ಯಗಳಿಗೆ ಆಹ್ವಾನ ನೀಡಿ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕೆರಿನ್‌ ಜೀನ್‌ ಪೆರಿ ಅವರು ಆರೋಗ್ಯ ಮತ್ತು ಮಾನವ ಸೇವೆ ಇಲಾಖೆಗೆ ಹೇಳಿದ್ದಾರೆ.

ಗರ್ಭಪಾತವನ್ನು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿದ ನಂತರದಲ್ಲಿ, ಗರ್ಭಪಾತಕ್ಕಾಗಿ ಅಂತರರಾಜ್ಯ ಪ್ರಯಾಣವು ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT