ಗುರುವಾರ , ಸೆಪ್ಟೆಂಬರ್ 23, 2021
21 °C

ಅಮೆರಿಕ: ಪಾಂಪಿಯೊಗೆ ಜಪಾನ್‌ ನೀಡಿದ್ದ ವಿಸ್ಕಿ ಬಾಟಲಿಗಳು ನಾಪತ್ತೆ, ತನಿಖೆ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಅವರಿಗೆ ಜಪಾನ್‌ ಉಡುಗೊರೆಯಾಗಿ ನೀಡಿದ್ದ ₹ 4.32 ಲಕ್ಷ ಮೌಲ್ಯದ (5,800 ಡಾಲರ್‌) ವಿಸ್ಕಿ ಬಾಟಲಿಗಳು ನಾಪತ್ತೆಯಾಗಿದ್ದು, ವಿದೇಶಾಂಗ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ.

ದುಬಾರಿ ಬೆಲೆಯ ಮದ್ಯದ ಈ ಬಾಟಲಿಗಳು ಎಲ್ಲಿವೆ, ಯಾರು ತೆಗೆದುಕೊಂಡು ಹೋಗಿದ್ದಾರೆ ಎಂಬ ಬಗ್ಗೆ ಇಲಾಖೆ ತನಿಖೆ ಆರಂಭಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್‌ ಸುದ್ದಿಸಂಸ್ಥೆ ವರದಿ ಮಾಡಿದೆ.

2019ರಲ್ಲಿ ಪಾಂಪಿಯೊ ಅವರು ಜಪಾನ್‌ಗೆ ಭೇಟಿ ನೀಡಿದ್ದರು. ಆಗ ಈ ವಿಸ್ಕಿ ಬಾಟಲಿಗಳನ್ನು ಜಪಾನ್‌ ಸರ್ಕಾರ ಉಡುಗೊರೆಯಾಗಿ ನೀಡಿತ್ತು ಎಂದು ದಾಖಲೆಗಳು ಹೇಳುತ್ತವೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಾಂಪಿಯೊ, ‘ನಾನು ವಿಸ್ಕಿ ಬಾಟಲಿಗಳನ್ನು ಸ್ವೀಕರಿಸಿಲ್ಲ. ಈ ಉಡುಗೊರೆಗಳು ನಾಪತ್ತೆಯಾಗಿವೆ ಅಥವಾ ಅವುಗಳು ಈಗ ಎಲ್ಲಿವೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

‘ವಿಸ್ಕಿ ಬಾಟಲಿಗಳ ಪತ್ತೆಗಾಗಿ ವಿದೇಶಾಂಗ ಇಲಾಖೆ ತನಿಖೆ ಆರಂಭಿಸುವಂಥ ವಿಚಿತ್ರ ತೀರ್ಮಾನ ಕೈಗೊಂಡಿದೆ. ಹಲವು ವಸ್ತುಗಳು ಕಳೆದ ಎರಡು ದಶಕಗಳ ಅವಧಿಯಲ್ಲಿ ನಾಪತ್ತೆಯಾಗಿವೆ. ಆಗಲೂ ಸಹ ತನಿಖೆಗಳು ನಡೆದಿವೆ. ಆದರೆ, ತನಿಖೆಯ ಫಲಿತಾಂಶ ಏನಾಯಿತು ಎಂಬುದು ಬಹಿರಂಗಗೊಂಡಿಲ್ಲ’ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು