ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲಿಫೋರ್ನಿಯಾ ವಿವಿಯಲ್ಲಿ ಜೈನ ಮತ್ತು ಹಿಂದೂ ಧರ್ಮ ಅಧ್ಯಯನ ಪೀಠ

ಭಾರತೀಯ-ಅಮೆರಿಕನ್ ಕುಟುಂಬಗಳ ದತ್ತಿನಿಧಿಯಿಂದ ಆರಂಭ
Last Updated 22 ಡಿಸೆಂಬರ್ 2020, 6:32 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ವಿಶ್ವವಿದ್ಯಾಲಯ ಧಾರ್ಮಿಕ ಅಧ್ಯಯನ ಕಾರ್ಯಕ್ರಮದ ಭಾಗವಾಗಿ ಜೈನ ಮತ್ತು ಹಿಂದೂ ಧರ್ಮದ ಅಧ್ಯಯನ ಪೀಠ (ದತ್ತಿನಿಧಿ) ಸ್ಥಾಪಿಸುವುದಾಗಿ ಪ್ರಕಟಿಸಿದೆ.

ಅಮೆರಿಕದಲ್ಲಿರುವ ಹಲವು ಭಾರತೀಯ- ಅಮೆರಿಕನ್ ಕುಟುಂಬಗಳು ದತ್ತಿ ನಿಧಿ ಸ್ಥಾಪಿಸುವ ಮೂಲಕ ಫ್ರೆಸ್ನೊದಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಜಂಟಿಯಾಗಿ ಜೈನ ಮತ್ತು ಹಿಂದೂ ಧರ್ಮದ ಅಧ್ಯಯನ ಪೀಠವನ್ನು ಸ್ಥಾಪಿಸಲು ಮುಂದಾಗಿವೆ.

ವಿಶ್ವವಿದ್ಯಾಲಯದ ಧಾರ್ಮಿಕ ಅಧ್ಯಯನ ಕಾರ್ಯಕ್ರಮಗಳ ಭಾಗವಾಗಿ, ಜೈನ ಮತ್ತು ಹಿಂದೂ ಧರ್ಮದ ದತ್ತಿನಿಧಿ ಅಧ್ಯಯನ ಪೀಠಗಳು ಆರಂಭವಾಗುತ್ತವೆ. ಈ ಪೀಠ, ಕಲಾ ಮತ್ತು ಮಾನವಿಕ ಕಾಲೇಜಿನಲ್ಲಿನ ತತ್ವಶಾಸ್ತ್ರ ವಿಭಾಗಕ್ಕೆ ಒಳಪಡಲಿದೆ.

ಈ ಎರಡೂ ಧರ್ಮಗಳ ಸಂಪ್ರದಾಯಗಳ ಬಗ್ಗೆ ಸಮರ್ಪಕವಾಗಿ ಅಧ್ಯಯನ ಮಾಡಿರುವ ತಜ್ಞ ಪ್ರಾಧ್ಯಾಪಕರೊಬ್ಬರನ್ನು 2021ರಲ್ಲಿ ಮಧ್ಯಂತರ ಅಧ್ಯಕ್ಷರನ್ನಾಗಿ ಆಯ್ಕೆ ನೇಮಕ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT