ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಕೋವಿಡ್ ಪಾಸಿಟಿವ್

Last Updated 27 ಏಪ್ರಿಲ್ 2022, 4:25 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಕೋವಿಡ್ ಸೋಂಕು ತಗಲಿರುವುದು ದೃಢಪಟ್ಟಿದೆ.
ಶ್ವೇತಭವನ, ಮಂಗಳವಾರ ಈ ಬಗ್ಗೆ ಹೇಳಿಕೆ ನೀಡಿದ್ದು, ಉಪಾಧ್ಯಕ್ಷರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದೆ.

ಹ್ಯಾರಿಸ್ ಅವರ ಮಾಧ್ಯಮ ಕಾರ್ಯದರ್ಶಿ ಕಿಸ್ಟನ್ ಅಲೆನ್ ಅವರು, ಕಮಲಾ ಹ್ಯಾರಿಸ್ ಜತೆ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಆಗಲೀ, ಅಥವಾ ಜಿಲ್ ಬಿಡೆನ್ ಆಗಲೀ, ನಿಕಟ ಸಂಪರ್ಕಕ್ಕೆ ಬಂದಿಲ್ಲ, ಅವರಿಬ್ಬರ ಪ್ರವಾಸದ ದಿನಾಂಕಗಳು ಬೇರೆಬೇರೆಯಾಗಿದ್ದವು. ಏಪ್ರಿಲ್ 18ರಂದು ಬಿಡೆನ್ ಮತ್ತು ಹ್ಯಾರಿಸ್ ಭೇಟಿಯಾಗಿದ್ದರು ತಿಳಿಸಿದ್ದಾರೆ.

ವೆಸ್ಟ್ ಕೋಸ್ಟ್‌ಗೆ ತೆರಳಿದ್ದ ಕಮಲಾ ಹ್ಯಾರಿಸ್ ಅವರು ಮರಳಿ ಬಂದಿದ್ದು, ನಂತರ ಕೋವಿಡ್ ಪರೀಕ್ಷೆ ನಡೆಸಿದಾಗ, ಸೋಂಕು ತಗುಲಿರುವುದು ಪತ್ತೆಯಾಗಿದೆ. ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದು, ಚಿಕಿತ್ಸೆ ಪಡೆಯುವ ಜತೆಗೆ ಕಚೇರಿ ಕೆಲಸಗಳನ್ನು ನಿರ್ವಹಿಸಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT