ಬುಧವಾರ, ಜೂನ್ 16, 2021
21 °C

ಕೊರೊನಾ ವಿರುದ್ಧದ ಹೋರಾಟ: ಭಾರತಕ್ಕೆ ಅಮೆರಿಕದ ನೆರವು– ಇಂದು‌ ಕಮಲಾ ಸಂದೇಶ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಅಮೆರಿಕ ಮುಂದಾಗಿದ್ದು, ಈ ನಿಟ್ಟಿನಲ್ಲಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಹಲವು ವಿಭಾಗಗಳಲ್ಲಿ ಭಾರತದ ಪಾಲುದಾರರಾಗಿರುವ ಅಮೆರಿಕ, ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಜನರ ಜೀವ ಉಳಿಸುವ ನಿಟ್ಟಿನಲ್ಲಿ ನಾವೂ ಜತೆಯಾಗಿದ್ದೇವೆ ಎಂಬ ಸಂದೇಶವನ್ನು ಕಮಲಾ ಅವರು ನೀಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ

ಅಮೆರಿಕ ಸರ್ಕಾರ ಆಯೋಜಿಸಿರುವ ‘ಬೊಲ್ಸ್ಟರಿಂಗ್‌ ಯುಎಸ್‌ ಕೋವಿಡ್ ರಿಲೀಫ್‌ ಎಫರ್ಟ್ಸ್ ಇನ್ ಇಂಡಿಯಾ : ಪರ್ಸ್ಪೆಕ್ಟಿವ್ಸ್ ಡಯಾಸ್ಪೋರಾ‘ ಎಂಬ ಆನ್‌ಲೈನ್ ಕಾರ್ಯಕ್ರಮದಲ್ಲಿ ಕಮಲಾ ಹ್ಯಾರಿಸ್ ಭಾಷಣ ಮಾಡಲಿದ್ದಾರೆ. ಎಂದು ದಕ್ಷಿಣ ಮತ್ತು ಮಧ್ಯ ಏಷ್ಯಾ ಬ್ಯೂರೊ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು