ಬ್ರಿಟಿಷ್ ಬಿಲಿಯನೇರ್ ರಿಚರ್ಡ್ ಬ್ರಾನ್ಸನ್ ಭಾನುವಾರ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. 'ವರ್ಜಿನ್' ಬಾಹ್ಯಾಕಾಶ ನೌಕೆಯ ಮೂಲಕ ಯಶಸ್ವಿಯಾಗಿ ಯಾನ ಪೂರೈಸಿದ ರಿಚರ್ಡ್, 'ಜೀವಮಾನದ ಅನುಭವ' ಎಂದು ಬಣ್ಣಿಸಿದರು.
ವರ್ಜಿನ್ ಗ್ಯಾಲಕ್ಟಿಕ್‌ನ 'ವಿಎಸ್‌ಎಸ್ ಯೂನಿಟಿ' ಗಗನ ನೌಕೆಯಲ್ಲಿ ಇಬ್ಬರು ಮಹಿಳೆಯರನ್ನು ಒಳಗೊಂಡ ಆರು ಗಗನಯಾತ್ರಿಗಳಿದ್ದರು. ಇಂದು ನ್ಯೂ ಮೆಕ್ಸಿಕೋದಿಂದ ಈ ಗಗನನೌಕೆ ಬಾಹ್ಯಾಕಾಶದತ್ತ ಪ್ರಯಾಣ ಬೆಳೆಸಿ ಪುನಃ ನಿಗದಿತ ಸ್ಥಳಕ್ಕೆ ಮರಳಿದೆ.
'ವರ್ಜಿನ್ ಗ್ಯಾಲಕ್ಟಿಕ್‌ನ ನಮ್ಮ ತಂಡಕ್ಕೆ ಅಭಿನಂದನೆಗಳು, 17 ವರ್ಷಗಳ ಕಠಿಣ ಪರಿಶ್ರಮದಿಂದ ನಾವು ಈವರೆಗೂ ತಲುಪಿದ್ದೇವೆ' ಎಂದು ರಿಚರ್ಡ್ ಹೇಳಿದರು.
ಭೂಮಿಯಿಂದ ಸುಮಾರು 85 ಕಿ.ಮೀ ಎತ್ತರದವರೆಗೂ ವಿಎಸ್‌ಎಸ್ ಯೂನಿನಿಟಿ ನೌಕೆ ತಲುಪಿತ್ತು. ಅಲ್ಲಿ ಉಂಟಾಗುವ ತೇಲುವ ಅನುಭವ ಮತ್ತು ಭೂಮಿಯ ಗೋಳಾಕಾರವನ್ನು ಕಣ್ತುಂಬಿಕೊಳ್ಳುವ ವಿಶೇಷ ಅವಕಾಶವನ್ನು ರಿಚರ್ಡ್ ಪಡೆದರು.
ಈ ಹಿಂದೆ ಹಲವು ಮಂದಿ ರಷ್ಯಾದ ರಾಕೆಟ್ ಮೂಲಕ ಹಲವು ಮಂದಿ 'ಬಾಹ್ಯಾಕಾಶ ಪ್ರವಾಸಿಗರು' ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವರೆಗೂ ಗಗನಯಾತ್ರೆ ನಡೆಸಿದ್ದಾರೆ.
ಇದನ್ನೂ ಓದಿ- ಅಮೆರಿಕ: ಬಾಹ್ಯಾಕಾಶದತ್ತ ಹಾರಲಿರುವ ಸಿರಿಶಾ ಬಾಂದ್ಲಾ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.