ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವಚೀನಾ: ನಾನ್‌ಜಿಂಗ್ ನಗರಲ್ಲಿ ಕೋವಿಡ್ ಹೆಚ್ಚಳ

Last Updated 26 ಜುಲೈ 2021, 14:48 IST
ಅಕ್ಷರ ಗಾತ್ರ

ಬೀಜಿಂಗ್‌: ಪೂರ್ವ ಚೀನಾದ ನಾನ್‌ಜಿಂಗ್ ನಗರದಲ್ಲಿ ನಿರಂತರವಾಗಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಸೋಮವಾರ ಒಂದೇ ದಿನ 38 ಹೊಸ ಪ್ರಕರಣಗಳು ವರದಿಯಾಗಿವೆ.

ಸುಕಿಯಾನ್ ನಗರ ಮತ್ತು ಈಶಾನ್ಯ ಪ್ರಾಂತ್ಯದ ಲಿಯಾನಿಂಗ್‌ನಲ್ಲೂ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.ಚೀನಾದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ವತಿಯಿಂದ ಸಾಮೂಹಿಕವಾಗಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಹಲವೆಡೆ ಲಾಕ್‌ಡೌನ್ ಕೂಡಾ ಜಾರಿ ಮಾಡಲಾಗಿದೆ.

ಮ್ಯಾನ್ಮಾರ್‌ನ ಗಡಿ ಸಮೀಪದ ಯುನ್ನಾನ್ ಪ್ರಾಂತ್ಯದಲ್ಲೂ ಈಚೆಗೆ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಇದರಲ್ಲಿ 36 ಪ್ರಕರಣಗಳು ಹೊರಗಿನಿಂದ ಬಂದವರಿಗೆ ಸಂಬಂಧಪಟ್ಟಂಥವು. ಜೂನ್ 30 ಮತ್ತು ಜುಲೈ 24ರ ಮೊದಲು ಯುನ್ನಾನ್‌ನಿಂದ ಗಡಿಯನ್ನು ದಾಟಿ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.

2019ರ ಕೊನೆಯಲ್ಲಿ ಚೀನಾದಲ್ಲಿ 87,228 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದವು. ಪ್ರಸ್ತುತ 741 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಒಟ್ಟು ಸಾವಿನ ಸಂಖ್ಯೆ 4,636ಕ್ಕೆ ಸ್ಥಿರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT