ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಪೂರ್ವ ಕರಾವಳಿ ಭಾಗದಲ್ಲೂ ಯೋಗ ವಿವಿ ಕ್ಯಾಂಪಸ್‌

Last Updated 15 ಜೂನ್ 2022, 12:56 IST
ಅಕ್ಷರ ಗಾತ್ರ

ವಾಷಿಂಗ್ಟನ್: ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಈಗಾಗಲೇ ಆರಂಭವಾಗಿ, ಮೊದಲ ಘಟಿಕೋತ್ಸವವನ್ನೂ ಪೂರೈಸಿರುವ ವಿವೇಕಾನಂದ ಯೋಗ ವಿಶ್ವವಿದ್ಯಾಲಯ, ದೇಶದ ಪೂರ್ವ ಕರಾವಳಿ ಭಾಗದಲ್ಲಿ ತನ್ನ ಮತ್ತೊಂದು ಕ್ಯಾಪಸ್‌ ತೆರೆಯುವ ಸಿದ್ಧತೆಯಲ್ಲಿದೆ.

ಇದೇ 12ರಂದು ನಡೆದ ಪ್ರಥಮ ಘಟಿಕೋತ್ಸವದಲ್ಲಿ 23 ವಿದ್ಯಾರ್ಥಿಗಳು ಯೋಗ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭಾರತದಿಂದ ಹೊರಗಡೆ ಸ್ಥಾಪನೆಯಾದ ಪ್ರಥಮ ಯೋಗ ವಿಶ್ವವಿದ್ಯಾಲಯ ಇದಾಗಿದೆ. ಈ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಡಾ.ಎಚ್‌.ಆರ್‌.ನಾಗೇಂದ್ರ ಅವರು 2002ರಲ್ಲಿ ಬೆಂಗಳೂರಿನಲ್ಲಿ ‘ಎಸ್‌ ವ್ಯಾಸ’ ಯೋಗ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ್ದು, ಅದರ ಕುಲಾಧಿಪತಿಯೂ ಆಗಿದ್ದಾರೆ.

’ಲಾಸ್ ಏಂಜಲೀಸ್‌ನ ಯೋಗ ವಿಶ್ವವಿದ್ಯಾಲದ ಕುಲಪತಿ ಅವರು ನ್ಯೂಯಾರ್ಕ್ ಮೂಲದ ಪ್ರೇಮ್ ಭಂಡಾರಿ ಅವರ ಜತೆ ಕ್ಯಾಂಪಸ್ ಸ್ಥಾಪನೆ ಕುರಿತು ಚರ್ಚೆ ನಡೆಸುತ್ತಿದ್ದಾರೆ.ಅಮೆರಿಕಾದಲ್ಲಿ ಯೋಗಕ್ಕೆ ಹೆಚ್ಚುತ್ತಿರುವ ಜನಪ್ರಿಯತೆ, ದೇಶದಲ್ಲಿ ಯೋಗ ಅಭ್ಯಾಸ ಮಾಡುವವರು, ಶಿಕ್ಷಕರು ಮತ್ತು ಸಂಶೋಧಕರಿಗೆ ಹೆಚ್ಚುತ್ತಿರುವ ಬೇಡಿಕೆ ಪರಿಗಣಿಸಿ ದೇಶದ ಪೂರ್ವ ಕರಾವಳಿ ಭಾಗದಲ್ಲೂ ಒಂದು ಕ್ಯಾಂಪಸ್‌ ತೆರೆಯುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.ಇದು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದ ಫಲವಾಗಿದೆ‘ ಎಂದು ಡಾ.ಎಚ್.ಆರ್.ನಾಗೇಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT